ಮೇಲಕ್ಕೆ ಚಿಮ್ಮಿದ ಕ್ಷಿಪಣಿ ರಾಜಧಾನಿ ಪಯೋಂಗ್ಯಾಂಗ್'ನ 2 ಲಕ್ಷ ಮಂದಿ ವಾಸಿಸುವ ಪ್ರಮುಖ ಪಟ್ಟಣ ಟೋಕ್ಚೋನ್'ನಲ್ಲಿ ಸ್ಫೋಟಗೊಂಡಿತ್ತು.

ಲಂಡನ್(ಜ.05): ಅಮೆರಿಕಾಕ್ಕೆ ಅಣ್ವಸ್ತ್ರ ಭೀತಿ ಹುಟ್ಟಿಸಿರುವ ಉತ್ತರ ಕೊರಿಯಾ ಒಮ್ಮೆ ತಾನು ಪರೀಕ್ಷಿಸಿದ ಕ್ಷಿಪಣಿ ವಿಫಲವಾಗಿ ಕೆಲವೇ ಕ್ಷಣಗಳಲ್ಲಿ ತನ್ನ ನಗರದಲ್ಲೇ ಸ್ಫೋಟಗೊಂಡಿತ್ತು.

ಅಮೆರಿಕಾ ನೀಡಿರುವ ಅಧಿಕೃತ ವರದಿಗಳ ಪ್ರಕಾರ ಮಧ್ಯಂತರ ವ್ಯಾಪ್ತಿಯ ಖಂಡಾಂತರ ಕ್ಷಿಪಣಿ ಹ್ವಾಸಾಂಗ್-12 ಅನ್ನು ಕಳೆದ ವರ್ಷ ಏಪ್ರಿಲ್' 28 ರಂದು ಪರೀಕ್ಷೆಗೊಳಪಡಿಸಲಾಗಿತ್ತು. ಮೇಲಕ್ಕೆ ಚಿಮ್ಮಿದ ಕ್ಷಿಪಣಿ ರಾಜಧಾನಿ ಪಯೋಂಗ್ಯಾಂಗ್'ನ 2 ಲಕ್ಷ ಮಂದಿ ವಾಸಿಸುವ ಪ್ರಮುಖ ಪಟ್ಟಣ ಟೋಕ್ಚೋನ್'ನಲ್ಲಿ ಸ್ಫೋಟಗೊಂಡಿತ್ತು.

ಕ್ಷಿಪಣಿ ಸ್ಫೋಟಗೊಂಡ ಪರಿಣಾಮ ಕೈಗಾರಿಕಾ ಕಟ್ಟಡದ ಸಂಕೀರ್ಣ ಅಥವಾ ಕೃಷಿ ಕಟ್ಟಡಗಳು ಹಾನಿಗೊಳಗಾಗಿವೆ ಎಂದು ಅಮೆರಿಕಾದ ಬೇಹುಗಾರಿಕೆ ಮೂಲಗಳು ಸ್ಯಾಟಲೈಟ್ ಚಿತ್ರಗಳ ಮೂಲಕ ಉದಾಹರಿಸಿವೆ.ಚಿಮ್ಮಿದ ಕ್ಷಿಪಣಿ 43 ಮೈಲಿಗಳಷ್ಟು ಹಾರದೆ ತಾಂತ್ರಿಕ ದೋಷದಿಂದ ವಿಫಲಗೊಂಡಿದೆ ಎಂದು ವರದಿಗಳು ತಿಳಿಸಿವೆ.