ಕೇರಳದ ಮುನ್ನಾರ್‌ಗೆ ಭೇಟಿ ಕೊಡೋ ಪ್ಲಾನ್ ಇದ್ದರೆ ಈಗ ಬೇಡ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 10, Aug 2018, 4:25 PM IST
Non Stop Heavy Rain In Kerala
Highlights

ನೀವು ಈ ವೀಕೆಂಡ್ ಕಳೆಯಲು ಮುನ್ನಾರ್ ಗೆ ಹೋಗಬೇಕು ಎಂದು ಕೊಂಡಿದ್ದರೆ ಈ ವಾರ ಅದನ್ನು ಮುಂದೂಡುವುದೇ ಒಳಿತು. 

ಬೆಂಗಳೂರು :   ಕೇರಳದಲ್ಲಿ ಈಗಾಗಲೇ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು, ಇದರಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. 

ಕೇರಳದ 60 ಪ್ರವಾಸಿ ಪ್ರದೇಶಗಳು ಮಳೆಯಿಂದ ಬಂದ್ ಆಗಿವೆ. ಪ್ರಸಿದ್ಧ ಮುನ್ನಾರ್ ನತ್ತ ಪ್ರವಾಸ ಹೋಗೇಬೇಕೆಂದುಕೊಂಡಿದ್ದರೆ ಅದನ್ನು ನೀವು ನಿಲ್ಲಿಸುವುದು ಒಳಿತು. 

ಕೇರಳದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು  ಹಲವೆಡೆ ಭೂ ಕುಸಿತ ಸಂಭವಿಸಿದೆ. 

ಭೂ ಕುಸಿತದಿಂದ ಹಲವು ರಸ್ತೆಗಳು  ಬಂದ್ ಆಗಿವೆ.  ಅನೇಕ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ನೀವು ಈ ವೀಕೆಂಡ್ ನಲ್ಲಿ ಕೇರಳದತ್ತ ಹೋಗಬೇಕು ಎಂದು ಕೊಂಡಲ್ಲಿ ಅದನ್ನು  ಮುಂದೂಡುವುದು ಒಳಿತು. 

ಈಗಾಗಲೇ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. 27ಕ್ಕೂ ಅಧಿಕ ಮಂದಿ ಮಳೆಯಿಂದ ಪ್ರಾಣ ಕಳೆದುಕೊಂಡಿದ್ದು, ರಕ್ಷಣಾ ಪಡೆಗಳಿಂದ ಭರದಿಂದ ರಕ್ಷಣಾ ಕಾರ್ಯ ನಡೆಯುತ್ತಿದೆ. 

loader