ಮಂಡ್ಯ (ಸೆ.22): ತಮಿಳುನಾಡಿಗೆ ನೀರು ನಿಲ್ಲಿಸಿದ್ದರೂ ಮಂಡ್ಯದಲ್ಲಿ ಪ್ರತಿಭಟನೆ ಕಾವು ಮಾತ್ರ ತಣ್ಣಗಾಗಿಲ್ಲ.
ಮಂಡ್ಯ ತಾಲೂಕಿನ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ಅಸಹಕಾರ ಚಳುವಳಿಗೆ ಸಹಕರಿಸುವಂತೆ ನೌಕರರಿಗೆ ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡ ಮನವಿ ಮಾಡಿದ್ದಾರೆ.
ಈ ವೇಳೆ ಮಾತನಾಡಿದ ಮಾದೇಗೌಡರು, ತಮಿಳುನಾಡಿಗೆ ಬಿಡಲು ಈಗ ನೀರಿಲ್ಲ, ಇನ್ನು ಸರ್ಕಾರಿ ಕಚೇರಿ ಬಂದ್ ಮಾಡಿ ಸಹಕಾರ ಕೊಡಿ ಎಂದು ಅಧಿಕಾರಿಗಳನ್ನು ಕೋರಿದ್ದೇವೆಂ ಹೇಳಿದ್ದಾರೆ. ಶ್ರೀರಂಗಪಟ್ಟಣದಲ್ಲಿ ಸರ್ಕಾರಿ ಕಚೇರಿಗಳಿಗೆ ತೆರಳಿದ ಹೋರಾಟಗಾರರು ಸಿಬ್ಬಂದಿಯನ್ನು ಕಚೇರಿಯಿಂದ ಹೊರಗೆ ಕಳಳುಹಿಸಿ, ಪ್ರತಿಭಟನೆಗೆ ಬೆಂಬಲಿಸುವಂತೆ ಶಾಂತ ರೀತಿಯಿಂದ ಮನವಿ ಮಾಡಿದರು.
ಮಂಡ್ಯದಿಂದ ಶ್ರೀರಂಗಪಟ್ಟಣದತ್ತ ಕೆಎಸ್ ಆರ್ ಟಿಸಿ ಬಸ್ ಗಳಲ್ಲಿ ಹೋರಾಟಗಾರು ಟಿಕೆಟ್ ರಹಿತ ಪ್ರಯಾಣ ಮಾಡಿದ್ದಾರೆ.
ಈ ವೇಳೆ ಟಿಕೆಟ್ ರಹಿತ ಪ್ರಯಾಣಿಕರನ್ನು ಬಂಧಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಜಿ. ಮಾದೇಗೌಡರು ಫೋನ್ ಮೂಲಕವೇ ಅಧಿಕಾರಿಗಳಿಗೆ ಕರೆ ಮಾಡಿ ಎಚ್ಚರಿಕೆ ನೀಡಿ ತಕ್ಷಣವೇ ಬಿಡುವಂತೆ ಸೂಚಿಸಿದರು.
