ನೋಯ್ಡಾ(ಡಿ.25): ಪಾರ್ಕ್‌ಗಳು ಸೇರಿದಂತೆ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಮುಸ್ಲಿಂ ಉದ್ಯೋಗಿಗಳು ಶುಕ್ರವಾರದ ನಮಾಜ್‌ ಮಾಡುವುದನ್ನು ತಡೆಯಬೇಕು ಎಂದು ಉತ್ತರ ಪ್ರದೇಶ ಪೊಲೀಸರು ನೋಯ್ಡಾದಲ್ಲಿರುವ ಎಲ್ಲಾ ಕಚೇರಿ ಹಾಗೂ ಕಂಪನಿಗಳಿಗೆ ನೋಟಿಸ್ ನೀಡಿದ್ದಾರೆ. 

ಒಂದು ವೇಳೆ ಕಂಪನಿಗಳ ಉದ್ಯೋಗಿಗಳು ಪಾರ್ಕ್‌ಗಳಲ್ಲಿ ನಮಾಜ್ ಮಾಡುವುದು ಕಂಡುಬಂದರೆ ಅದಕ್ಕೆ ಕಂಪನಿಗಳನ್ನೇ ಹೊಣೆ ಮಾಡಲಾಗುವುದು ಎಂದು ಪೊಲೀಸರು ಎಚ್ಚರಿಸಿದ್ದಾರೆ.

ಶುಕ್ರವಾರದ ನಮಾಜ್ ಅನ್ನು ಪಾರ್ಕ್‌ಗಳಂತಹ ತೆರೆದ ಸಾರ್ವಜನಿಕ ಸ್ಥಳಗಳಲ್ಲಿ ನಡೆಸದೆ ಮಸೀದಿಗಳಲ್ಲಿ ಮಾತ್ರ ನಡೆಸುವಂತೆ ಮುಸ್ಲಿಂ ಉದ್ಯೋಗಿಗಳಿಗೆ ಸೂಚಿಸಬೇಕು ಎಂದು ಉತ್ತರ ಪ್ರದೇಶ ಪೊಲೀಸರು ಕಂಪನಿಗಳಿಗೆ ಆದೇಶಿಸಿದ್ದಾರೆ.

ನೋಯ್ಡಾದಲ್ಲಿ ಪಾರ್ಕ್‌ಗಳಲ್ಲಿ ನಮಾಜ್ ಮಾಡುವುದು ಇತ್ತೀಚಿಗೆ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ನೋಯ್ಡಾದ ಎಲ್ಲಾ ಪೊಲೀಸ್ ಠಾಣೆಗಳು ಕಳೆದ ವಾರ ಈ ನೋಟಿಸ್ ಜಾರಿ ಮಾಡಿವೆ.

ಇನ್ನು ಪೊಲೀಸರ ಈ ನೋಟಿಸ್ ಇದೀಗ ವಿವಾದ ಸೃಷ್ಟಿಸಿದ್ದು, ಇದರ ಹಿಂದೆ ಉತ್ತರಪ್ರದೇಶ ಸರ್ಕಾರದ ಹುನ್ನಾರ ಅಡಗಿದೆ ಎಂದು ಹಲವರು ಆರೋಪಿಸಿದ್ದಾರೆ.

"