ಮಹಿಳೆ ವ್ಯಭಿಚಾರಿಣಿಯೇ ಆದರೂ ಆಕೆಯ ಇಚ್ಛೆಗೆ ವಿರುದ್ಧವಾಗಿ ಸೆಕ್ಸ್ ಮಾಡುವಂತಿಲ್ಲ. ಇದು ಸುಪ್ರೀಂ ತೀರ್ಪು.

ನವದೆಹಲಿ(ಅ. 31): ಮಹಿಳೆಯ ಕ್ಯಾರೆಕ್ಟರ್ ಹೇಗೆ ಇರಲಿ ಬಲವಂತವಾಗಿ ಆಕೆಯನ್ನ ಸಂಭೋಗಿಸುವ ಹಕ್ಕು ಪುರುಷನಿಗಿರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. 

1997ರ ಅತ್ಯಾಚಾರ ಪ್ರಕರಣವೊಂದರಲ್ಲಿ ದೆಹಲಿ ಹೈಕೋರ್ಟ್ ತೀರ್ಪನ್ನು ತಳ್ಳಿ ಹಾಕಿರುವ ಸುಪ್ರೀಂ ಕೋರ್ಟ್ ಇಂತಹದ್ದೊಂದು ಮಹತ್ವದ ಆದೇಶ ಹೊರಡಿಸಿದೆ. 

ಒಬ್ಬ ಮಹಿಳೆ ನೈತಿಕವಾಗಿ ಏನೇ ಇರಲಿ, ಎಷ್ಟು ಜನರೊಂದಿಗಾದರೂ ಹಾಸಿಗೆ ಹಂಚಿಕೊಂಡಿರಲಿ, ವೇಶ್ಯೆಯೇ ಆಗಿರಲಿ, ಆಕೆಯ ಇಚ್ಛೆಗೆ ವಿರುದ್ಧವಾಗಿ ಆಕೆಯನ್ನು ಬಲವಂತವಾಗಿ ಸೆಕ್ಸ್ ಮಾಡುವಂತಿಲ್ಲ ಎಂದು ಕೋರ್ಟ್ ಹೇಳಿದೆ.