ಸುನಂದ ಪುಷ್ಕರ್ ಶಶಿ ತರೂರ್‌ಗೆ ಕಳುಹಿಸಿದ ಕೊನೆಯ ಇ-ಮೇಲ್ ನಲ್ಲಿ ಏನಿತ್ತು?

news | Monday, May 28th, 2018
Suvarna Web Desk
Highlights

ದೆಹಲಿ ಪೊಲೀಸರು ಸಲ್ಲಿಸಿದ್ದ ಚಾರ್ಜ್‌ಶೀಟ್‌ನಲ್ಲಿ ಇದೀಗ  ಸುನಂದ್ ಪುಷ್ಕರ್ ಸಾವಿನ ಬಗ್ಗೆ ಇರುವ ಅನುಮಾನ ಹೆಚ್ಚಿಸಿದೆ.  ಪುಷ್ಕರ್ ತನ್ನ ಪತಿ ಶಶಿ ತರೂರ್‌ಗೆ ಕಳುಹಿಸಿದ ಕೊನೆಯ ಇ-ಮೇಲ್ ಸಂದೇಶದಲ್ಲಿ,  ''ನನಗೆ ಬದುಕಲು ಆಸೆ ಇಲ್ಲ ಎಂದಿದ್ದಾರೆ.
 

ದೆಹಲಿ(ಮೇ 28) : ಕೇಂದ್ರ ಮಾಜಿ ಸಚಿವ ಶಶಿ ತರೂರ್ ಪತ್ನಿ ಸುನಂದ್ ಪುಷ್ಕರ್ ಅನುಮಾನಾಸ್ವದ ಸಾವು ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಪ್ರಕರಣ ವಿಚಾರಣೆ ತೀವ್ರಗೊಳ್ಳುತ್ತಿರುವುಂತೆ ಹೊಸ ವಿಚಾರಗಳು ಹೊರಬರುತ್ತಿದೆ. ಇದೀಗ ಸುನಂದ್ ಪುಷ್ಕರ್ ಪತಿ ಶಶಿ ತರೂರ್‌ಗೆ ಕಳುಹಿಸಿದ ಕೊನೆಯ ಇ-ಮೇಲ್ ಸಂದೇಶ ಸಾವಿನ ಅನುಮಾನವನ್ನ ಮತ್ತಷ್ಟು ಬಲಪಡಿಸಿದೆ. 

ದೆಹಲಿ ಪೊಲೀಸರು ಸಲ್ಲಿಸಿರುವ 3000 ಸಾವಿರ ಪುಟಗಳ ಚಾರ್ಜ್ ಶೀಟ್ ನಲ್ಲಿ ಪುಷ್ಕರ್ ಹಾಗೂ ಶಶಿ ತರೂರ್ ನಡುವಿನ ಇ-ಮೇಲ್ ಸಂಭಾಷಣೆಯನ್ನ ಬಹಿರಂಗ ಪಡಿಸಿದೆ. ಸುನಂದ್ ಪುಷ್ಕರ್ ಶವ ಪತ್ತೆಯಾಗೋ 9 ದಿನಗಳ ಮುಂಚೆ ಶಶಿ ತರೂರ್‌ಗೆ ಇ-ಮೇಲ್ ಸಂದೇಶ ರವಾನಿಸಿದ್ದರು. ನನಗೆ ಬದುಕಲು ಆಸೆ ಇಲ್ಲ. ಸಾವಿಗಾಗಿ ನಾನು ಪ್ರಾರ್ಥಿಸುತ್ತಿದ್ದೇನೆ ಎಂದು ಪುಷ್ಕರ್ ತನ್ನ ಇ-ಮೇಲೆ ಸಂದೇಶದಲ್ಲಿ ಬರೆದಿದ್ದಾರೆ. ಈ ಸಂದೇಶ ಫುಷ್ಕರ್ ಸಾವಲ್ಲ ಕೊಲೆ ಅನುಮಾನವನ್ನ ಹೆಚ್ಚಿಸಿದೆ.

ಜನವರಿ 8 ರಂದು ಸುನಂದ್ ಪುಷ್ಕರ್ ಈ ಸಂದೇಶವನ್ನ ಶಶಿ ತರೂರ್‌ಗೆ ಕಳುಹಿಸಿದ್ದಾರೆ. ಬಳಿಕ ಒಂದು ವಾರದಲ್ಲಿ ಸುನಂದ ಪುಷ್ಕರ್ ದೆಹಲಿ ಹೊಟೆಲ್ ಒಂದರಲ್ಲಿ ಅನುಮಾನಸ್ವಾದವಾಗಿ ಸಾವನ್ನಪ್ಪಿದ್ದರು. ಪುಷ್ಕರ್ ತಂಗಿದ್ದ ಹೊಟೆಲ್ ಕೊಠಡಿಯಲ್ಲಿ 27 ಆಲ್‌ಪ್ರಾಕ್ಸ್ ಮಾತ್ರೆಗಳು ಸಿಕ್ಕಿವೆ ಎಂದು ಪೊಲೀಸರು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಶಶಿ ತರೂರ್ ಹಾಗೂ ಸುನಂದ ಪುಷ್ಕರ್ ನಡುವಿನ ಸಂಬಂಧ ಹಳಸಿತ್ತು. ಸುನಂದ್ ಪುಷ್ಕರ್ ಮಾನಸಿಕವಾಗಿ ಬಹಳ ನೊಂದಿದ್ದರೂ, ಪತಿ ತರೂರ್ ಅಸಡ್ಡೆ ತೋರಿದ್ದಾರೆ. ಸಾವಿಗೂ ಮುನ್ನ ಸುನಂದ ಪುಷ್ಕರ್ ಫೋನ್ ಕರೆಗಳನ್ನು ತರೂರ್ ಸ್ವೀಕರಿಸಿಲ್ಲ ಎಂದು ದೆಹಲಿ ಪೊಲೀಸರು ತಮ್ಮ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಈಗಾಗಲೇ ಹಲವು ತಿರುವು ಪಡೆದುಕೊಂಡಿರುವ ಪುಷ್ಕರ್ ಅನುಮಾನಸ್ವದ ಸಾವು ಪ್ರಕರಣ ಮುಂದಿನ ದಿನಗಳಲ್ಲಿ ಇನ್ನಷ್ಟು ತಿರುವು ಪಡೆಯೋದರಲ್ಲಿ ಯಾವುದೇ ಅನುಮಾನವಿಲ್ಲ.

Comments 0
Add Comment

  Related Posts

  Sridevi Died in cardiac arrest

  video | Monday, February 26th, 2018

  CM Byte For Kashinath Death

  video | Thursday, January 18th, 2018

  Karnataka Elections Stars Get Ready To Contest

  video | Sunday, January 14th, 2018

  UT Khader Reaction About Mangaluru clash

  video | Sunday, January 7th, 2018

  Sridevi Died in cardiac arrest

  video | Monday, February 26th, 2018
  Nirupama K S