ನಿನ್ನೆ ಹೊರಡಿಸಿದ ಆದೇಶವೊಂದರಲ್ಲಿ ಟ್ರಂಪ್, 7 ಮುಸ್ಲಿಮ್ ದೇಶಗಳ ನಾಗರಿಕರಿಗೆ ಅಮೆರಿಕಾ ಪ್ರವೇಶನ್ನು ನಿಷೇಧಿಸಿದ್ದಾರೆ.
ವಾಷಿಂಗ್ಟನ್ (ಜ.28): ಅಮೆರಿಕಾದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಲೇ ಡೊನಾಲ್ಡ್ ಟ್ರಂಪ್ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ.
ನಿನ್ನೆ ಹೊರಡಿಸಿದ ಆದೇಶವೊಂದರಲ್ಲಿ ಟ್ರಂಪ್, 7 ಮುಸ್ಲಿಮ್ ದೇಶಗಳ ನಾಗರಿಕರಿಗೆ ಅಮೆರಿಕಾ ಪ್ರವೇಶನ್ನು ನಿಷೇಧಿಸಿದ್ದಾರೆ.
ಅಮೆರಿಕಾಕ್ಕೆ ಉಗ್ರವಾದಿಗಳು ಬೇಕಾಗಿಲ್ಲ, ಆದ್ದರಿಂದ ಕೆಲವು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಟ್ರಂಪ್ ಈ ಸಂದರ್ಭದಲ್ಲಿ ಹೇಳಿದ್ದಾರೆ.
ಅಮೆರಿಕಾ ಹಾಗೂ ಇಲ್ಲಿನ ಜನರನ್ನು ಪ್ರೀತಿಸುವ ಜನರಿಗೆ ಮಾತ್ರ ಈ ದೇಶದೊಳಗೆ ಪ್ರವೇಶವಿರುವುದು ಎಂದು ಟ್ರಂಪ್ ಹೇಳಿದ್ದಾರೆ.
ಹೊಸ ನಿಯಮದ ಪ್ರಕಾರ, ನಿರಾಶ್ರಿತರು ಹಾಗೂ ಮುಸ್ಲಿಮ್ ದೇಶಗಳಾಗಿರುವ ರಾನ್, ಇರಾಕ್, ಲಿಬಿಯಾ, ಸೊಮಾಲಿಯಾ, ಸುಡಾನ್, ಸಿರಿಯಾ ಹಾಗೂ ಯೆಮೆನ್ ದೇಶಗಳ ನಾಗರಿಕರಿಗೆ ಮುಂದಿನ 90 ದಿನಗಳ ಅವಧಿಯಲ್ಲಿ ವೀಸಾ ನೀಡಲಾಗದೆಂದು ವರದಿಯಾಗಿದೆ.
