ಸರಕಾರದ ಈ ಕ್ರಮವನ್ನು ರಾಷ್ಟ್ರೀಯ ರೆಸ್ಟೋರೆಂಟ್ ಸಂಘವು ಸ್ವಾಗಿಸಿದೆ. ಬಾರ್ ಮತ್ತು ಹೋಟೆಲ್ ಉದ್ಯಮಕ್ಕೆ ಸಾಕಷ್ಟು ಲಾಭವಾಗಲಿದೆ ಎಂದು ಅಭಿಪ್ರಾಯಪಟ್ಟಿದೆ.

ಬೆಂಗಳೂರು(ಮಾ. 15): ತಮ್ ಬೆಜೆಟ್'ನಲ್ಲಿ ರಾಜ್ಯದ ಎಲ್ಲಾ ವರ್ಗದವರಿಗೆ ಖುಷಿಪಡಿಸಲು ಯತ್ನಿಸಿರುವ ಸಿದ್ದರಾಮಯ್ಯ, ಮದ್ಯಪಾನಿಗಳಿಗೆ ಖುಷಿಯ ಸುದ್ದಿ ಕೊಟ್ಟಿದ್ದಾರೆ. ಮದ್ಯದ ಮೇಲಿನ ವ್ಯಾಟ್ ತೆರಿಗೆಯನ್ನು ರದ್ದುಗೊಳಿಸಲು ನಿರ್ಧರಿಸಿರುವುದಾಗಿ ಸಿದ್ದರಾಮಯ್ಯ ತಿಳಿಸಿದರು. ಏಪ್ರಿಲ್ 1ರಿಂದ ವ್ಯಾಟ್ ತೆರಿಗೆ ಇಲ್ಲದೆಯೇ ಮದ್ಯಮಾರಾಟ ನಡೆಯಲಿದೆ. ಇದರೊಂದಿಗೆ ಮದ್ಯಪೇಯಗಳ ಬೆಲೆಯಲ್ಲಿ ಸ್ವಲ್ಪಮಟ್ಟಿಗೆ ಇಳಿಕೆಯಾಗಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮದ್ಯ ರಫ್ತು ಮೇಲೆ ವಿಧಿಸಲಾಗಿದ್ದ 2 ರೂ ಆಡಳಿತ ಶುಲ್ಕ(Administrative fee) ಹಾಗೂ ಸ್ಪಿರಿಟ್ ಮೇಲಿನ 1 ರೂ ಆಡಳಿತ ಶುಲ್ಕವನ್ನು ಹಿಂಪಡೆಯಲು ಸರಕಾರ ಯೋಜಿಸಿದೆ.

ಸರಕಾರದ ಈ ಕ್ರಮವನ್ನು ರಾಷ್ಟ್ರೀಯ ರೆಸ್ಟೋರೆಂಟ್ ಸಂಘವು ಸ್ವಾಗಿಸಿದೆ. ಬಾರ್ ಮತ್ತು ಹೋಟೆಲ್ ಉದ್ಯಮಕ್ಕೆ ಸಾಕಷ್ಟು ಲಾಭವಾಗಲಿದೆ ಎಂದು ಅಭಿಪ್ರಾಯಪಟ್ಟಿದೆ.