ಕೇಂದ್ರದ ವಿರುದ್ಧ ತಿರುಗಿ ಬಿದ್ದರಾ ಆಂಧ್ರ ಸಿಎಂ ನಾಯ್ಡು..?

First Published 21, Feb 2018, 8:21 AM IST
No trust motion Against Centre  says Andhra Pradesh CM Chandrababu Naidu
Highlights

ಆಂಧ್ರಪ್ರದೇಶಕ್ಕೆ ನ್ಯಾಯ ಕಲ್ಪಿಸಲು ಇತರ ಪಕ್ಷಗಳ ಜೊತೆಗೂಡಿ ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲೂ ಸಿದ್ಧ ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಎಚ್ಚರಿಕೆ ನೀಡಿದ್ದಾರೆ. 

ಅಮರಾವತಿ: ಆಂಧ್ರಪ್ರದೇಶಕ್ಕೆ ನ್ಯಾಯ ಕಲ್ಪಿಸಲು ಇತರ ಪಕ್ಷಗಳ ಜೊತೆಗೂಡಿ ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲೂ ಸಿದ್ಧ ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಎಚ್ಚರಿಕೆ ನೀಡಿದ್ದಾರೆ. ಆಂಧ್ರಕ್ಕೆ ಈ ಬಜೆಟ್‌ನಲ್ಲಿ ಕಡಿಮೆ ಅನುದಾನ ನೀಡಿರುವುದು ಟಿಡಿಪಿ ಅಸ ಮಾಧಾನಕ್ಕೆ ಕಾರಣ ವಾಗಿದೆ.

ಆಂಧ್ರಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಲು ಮಾ.5ರ ಗಡುವು ನೀಡಲಾಗಿದೆ. ಆದರೆ, ಅವಿಶ್ವಾಸ ಗೊತ್ತುವಳಿ ತಮ್ಮ ಕೊನೆಯ ಆಯ್ಕೆ ಎಂದಿದ್ದಾರೆ ನಾಯ್ಡು. ಇದೇ ವೇಳೆ ಕೇಂದ್ರದ ಮೇಲೆ ಒತ್ತಡ ಹೇರಲು ಸರ್ವಪಕ್ಷ ಸಭೆ ಕರೆಯಲು ನಾಯ್ಡು ಉದ್ದೇಶಿಸಿದ್ದಾರೆ ಎಂದು ಟಿಡಿಪಿ ಮೂಲಗಳು ತಿಳಿಸಿವೆ.

loader