ಹೊಸ ಆದಾಯ ತೆರಿಗೆ ಕಾಯ್ದೆ ಪ್ರಕಾರ ಚಿನ್ನಾಭರಣಗಳ ಮೇಲೆ ಯಾವುದೇ ತೆರಿಗೆಯನ್ನು ವಿಧಿಸಲಾಗುವುದಿಲ್ಲವೆಂದು ವಿತ್ತ ಸಚಿವಾಲಯ ಸ್ಪಷ್ಟಪಡಿಸಿದೆ.
ನವದೆಹಲಿ (ಡಿ.01): ಹೊಸ ಆದಾಯ ತೆರಿಗೆ ಕಾಯ್ದೆ ಪ್ರಕಾರ ಚಿನ್ನಾಭರಣಗಳ ಮೇಲೆ ಯಾವುದೇ ತೆರಿಗೆಯನ್ನು ವಿಧಿಸಲಾಗುವುದಿಲ್ಲವೆಂದು ವಿತ್ತ ಸಚಿವಾಲಯ ಸ್ಪಷ್ಟಪಡಿಸಿದೆ.
ವಂಶ ಪರಂಪರಾಗತವಾಗಿ ಬಂದಿರುವ ಚಿನ್ನದ ಮೇಲೂ ಸಹ ಈ ಕಾಯ್ದೆ ಅನ್ವಯವಾಗುವುದಿಲ್ಲ.
“ ವಿವಾಹಿತ ಮಹಿಳೆಯರಿಗೆ 500 ಗ್ರಾಂವರೆಗೆ, ಅವಿವಾಹಿತ ಮಹಿಳೆಯರಿಗೆ 250 ಗ್ರಾಂ ಹಾಗೂ ಪುರುಷರಿಗೆ 100 ಗ್ರಾಂ ಚಿನ್ನದವರೆಗೆ ತೆರಿಗೆ ಬೀಳುವುದಿಲ್ಲ. ಅದಕ್ಕೂ ಜಾಸ್ತಿಯಿದ್ದರೆ ಮಾತ್ರ ತೆರಿಗೆ ಬೀಳುತ್ತದೆ" ಎಂದು ವಿತ್ತ ಸಚಿವಾಲಯ ಹೇಳಿದೆ.
ನೋಟು ನಿಷೇಧ ಘೋಷಣೆಯಾದಾಗಲೇ ಚಿನ್ನದ ಮೇಲೆ ನಿರ್ಬಂಧ ಹೇರುವ ಪ್ರಸ್ತಾವವಿಲ್ಲವೆಂದು ಸರ್ಕಾರ ಸ್ಪಷ್ಟಪಡಿಸಿತ್ತು. ಅದನ್ನೇ ಈಗ ಪುನರುಚ್ಚಿಸಿದಂತಾಗಿದೆ.
