ಆಯೋಜಕರು ಉದ್ದೇಶಪೂರ್ವಕವಾಗಿ ವಿಧಾನ ಪರಿಷತ್ ಸದಸ್ಯ ಈಶ್ವರಪ್ಪ ಫೋಟೋ ಮರೆ ಮಾಚಿದ್ದಾರೆ ಎಂಬ ಗುಸುಗುಸು ಕೇಳಿ ಬಂತು.

ಕಲಬುರಗಿ (ಜ.21): ಇವತ್ತಿನ ಬಿಜೆಪಿ ಕಾರ್ಯಕಾರಿಣಿ ಸಂಬಂಧ ಹಾಕಲಾದ ಫ್ಲೆಕ್ಸ್​ ಹಾಗೂ ಬ್ಯಾನರ್'ಗಳಲ್ಲಿ ಈಶ್ವರಪ್ಪ ಫೋಟೋ ಕಾಣದಾಗಿತ್ತು.

ಆಯೋಜಕರು ಉದ್ದೇಶಪೂರ್ವಕವಾಗಿ ವಿಧಾನ ಪರಿಷತ್ ಸದಸ್ಯ ಈಶ್ವರಪ್ಪ ಫೋಟೋ ಮರೆ ಮಾಚಿದ್ದಾರೆ ಎಂಬ ಗುಸುಗುಸು ಕೇಳಿ ಬಂತು.

ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಆಜ್ಞೆಯಂತೆ ಇದು ನಡೆಯಿತಾ? ಅಥವಾ ನಿಜಕ್ಕೂ ಅಚಾತುರ್ಯನಾ? ರಾಯಣ್ಣ ಬ್ರಿಗೇಡ್​​​​ ವಿಚಾರವಾಗಿ ಈಶ್ವರಪ್ಪ ಹಾಗೂ ಯಡಿಯೂರಪ್ಪ ನಡುವಿನ ಮನಸ್ತಾಪ ವಿಕೋಪ ತಲುಪಿರುವಾಗ ಈ ಬೆಳವಣಿಗೆ ಭಾರೀ ಚರ್ಚೆಗೆ ಒಳಗಾಗಿತ್ತು. ಕೊನೆಗೂ ಯಡಿಯೂರಪ್ಪ, ಈಶ್ವರಪ್ಪ ನಾನೊಂದು ತೀರ ನೀನೊಂದು ತೀರವಾಗಿದ್ದು ಕಂಡು ಬಂತು.