ತೀವ್ರ ಬರಗಾಲದಿಂದ ತತ್ತರಿಸಿರೋ ರೈತರ ನೆರವಿಗೆ ಬರುವಂತೆ, ತೋಟಗಾರಿಕೆ ಆಯುಕ್ತರು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದರು. ಇದೀಗ ಮೈಸೂರು ಡಿಸಿ ರಂದೀಪ್ ಆದೇಶದಿಂದ ರೈತರಿಗೆ ಸ್ವಲ್ಪ ಭರವಸೆ ಸಿಕ್ಕಂತಾಗಿದೆ.

ಮೈಸೂರು(ಆ.11): ರೈತರ ಹಿತದೃಷ್ಟಿ ಕಾಪಾಡುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಧಿಕಾರಿ ಡಿ. ರಂದೀಪ್ ಮಹತ್ವದ ಆದೇಶ ಹೊರಡಿಸಿದ್ದಾರೆ.

ಇನ್ಮುಂದೆ ಮಲ್ಟಿಪ್ಲೆಕ್ಸ್, ಮಾಲ್​​​​​​​ಗಳಲ್ಲಿ ತಂಪು ಪಾನಿಯಗಳಿಗೆ ಬ್ರೇಕ್ ನೀಡಿ, ರೈತರ ಬೆಳೆಯುವ ಎಳನೀರು ಮಾತ್ರ ಮಾರುವಂತೆ ಆದೇಶ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮೈಸೂರಿನ ಎಲ್ಲಾ ಮಲ್ಟಿಪ್ಲೆಕ್ಸ್ ಹಾಗೂ ಮಾಲ್​ಗಳಲ್ಲಿ ಇನ್ಮುಂದೆ ಕೇವಲ ಎಳನೀರು ಮಾತ್ರ ,ಮಾರಾಟ ಮಾಡುವಂತೆ ಡಿಸಿ ರಂದೀಪ್ ಮೈಸೂರು ಚಲನಚಿತ್ರ ಒಕ್ಕೂಟಕ್ಕೆ ಪತ್ರ ಬರೆದಿದ್ದಾರೆ.

ರೈತರ ಉತ್ತೇಜನಕ್ಕೆ ಮಾಲ್'ಗಳಲ್ಲಿ ಎಳನೀರು ಮಾರುವಂತೆ ಚಿಕ್ಕಮಗಳೂರು ಪರಿಷತ್ ಸದಸ್ಯ ಎಂ.ಕೆ. ಪ್ರಾಣೀಶ್, ತೋಟಗಾರಿಕೆ ಸಚಿವರಿಗೆ ಪತ್ರ ಬರೆದಿದ್ದರು. ತೀವ್ರ ಬರಗಾಲದಿಂದ ತತ್ತರಿಸಿರೋ ರೈತರ ನೆರವಿಗೆ ಬರುವಂತೆ, ತೋಟಗಾರಿಕೆ ಆಯುಕ್ತರು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದರು. ಇದೀಗ ಮೈಸೂರು ಡಿಸಿ ರಂದೀಪ್ ಆದೇಶದಿಂದ ರೈತರಿಗೆ ಸ್ವಲ್ಪ ಭರವಸೆ ಸಿಕ್ಕಂತಾಗಿದೆ.