ಸಾರ್ವಜನಿಕ ವಲಯದ ಮತ್ತು ಖಾಸಗಿ ವಲಯದ ಬ್ಯಾಂಕ್`ಗಳು ಇದಕ್ಕೆ ಸಮ್ಮತಿ ಸೂಚಿಸಿವೆ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ತಿಳಿಸಿದ್ಧಾರೆ. ನೋಟುಗಳ ಬ್ಯಾನ್ ಬಳಿಕ ದೇಶಾದ್ಯಂತ ಆಗಿರುವ ಪರಿಣಾಮದ ಪರಿಶೀಲನೆ ನಡೆಸಿದ ಬಳಿಕ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ನವದೆಹಲಿ(ನ.23): 500 ಮತ್ತು 1000 ನೋಟುಗಳ ರದ್ದು ಬಳಿಕ ಜನರ ದಿನನಿತ್ಯದ ವಹಿವಾಟು ತೀರಾ ಕಷ್ಟಕರವಾಗಿದೆ. ಈ ಹಿನ್ನೆಲೆಯಲ್ಲಿ ಡಿಜಿಟಲ್ ಪೇಮೆಂಟ್ ವ್ಯವಸ್ಥೆಯನ್ನ ಉತ್ತೇಜಿಸಲು ಡಿಸೆಂಬರ್ ಅಂತ್ಯದವರೆಗೆ ಡಿಜಿಟಲ್ ಪೇಮೆಂಟ್`ಗೆ ಯಾವುದೇ ಶುಲ್ಕ ವಿಧಿಸದಿರಲು ನಿರ್ಧರಿಸಲಾಗಿದೆ.

ಸಾರ್ವಜನಿಕ ವಲಯದ ಮತ್ತು ಖಾಸಗಿ ವಲಯದ ಬ್ಯಾಂಕ್`ಗಳು ಇದಕ್ಕೆ ಸಮ್ಮತಿ ಸೂಚಿಸಿವೆ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ತಿಳಿಸಿದ್ಧಾರೆ. ನೋಟುಗಳ ಬ್ಯಾನ್ ಬಳಿಕ ದೇಶಾದ್ಯಂತ ಆಗಿರುವ ಪರಿಣಾಮದ ಪರಿಶೀಲನೆ ನಡೆಸಿದ ಬಳಿಕ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ಜೊತೆಗೆ ಒಬ್ಬ ವ್ಯಕ್ತಿ ದಿನಕ್ಕೆ ಮಾಡಬಹುದಾದಂತಹ ಡಿಜಿಟಲ್ ಪೇಮೆಂಟ್`ನ ಮೊತ್ತವನ್ನ 10ಸಾವಿರದಿಂದ 20 ಸಾವಿರಕ್ಕೆ ಏರಿಸಲಾಗಿದೆ.