ಬೆಂಗಳೂರು[ಆ.30]: ಜಾರಿ ನಿರ್ದೇಶನಾಲಯ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಡಿಕೆ ಶಿವಕುಮಾರ್, ಸಂಕಷ್ಟದಿಂದ ಪಾರಾಗಲು ಯತ್ನಿಸುತ್ತಿದ್ದಾರೆ. ಆದರೀಗ ಅವರೆಲ್ಲಾ ಪ್ರಯತ್ನಗಳು ವಿಫಲವಾಗುತ್ತಿದ್ದು, ಒಂದಾದ ಬಳಿಕ ಮತ್ತೊಂದರಂತೆ ಸಂಕಷ್ಟಗಳು ಎದುರಾಗುತ್ತಿವೆ. ನಿನ್ನೆ ಗುರುವಾರ ಡಿಕೆಶಿ, ಇಡಿ ತನ್ನ ವಿರುದ್ಧ ಜಾರಿಗೊಳಿಸಿದ್ದ ಸಮನ್ಸ್ ಹಾಗೂ ತನಿಖೆಯನ್ನು ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್‌ಗೆ ಸಲ್ಲಿಸಿದ್ದ ಮನವಿ ವಜಾಗೊಂಡಿತ್ತು. ಇಂದು ಶುಕ್ರವಾರ ಮತ್ತೆ ಮಧ್ಯಂತರ ತಡೆಯಾಜ್ಞೆ ವಿಸ್ತರಣೆ ಕೋರಿ ಸಲ್ಲಿಸಿದ್ದ ಸರ್ಜಿಯೂ ತಿರಸ್ಕೃತಗೊಂಡಿದೆ.

"

ಇಡಿ ಬಲೆಯಲ್ಲಿ ಸಿಲುಕಿದ ಡಿಕೆಶಿ: ಈವರೆಗೆ ಏನೇನಾಯ್ತು? ೆಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹೌದು ಐಟಿ ದಾಳಿ ನಡೆದಮದಿನಿಂದಲೂ ಒಂದಾದ ಬಳಿಕ ಮತ್ತೊಂದರಂತೆ ಸಂಕಷ್ಟ ಎದುರಿಸುತ್ತಿರುವ ಡಿಕೆಶಿ, ಗುರುವಾಗ ಹೈಕೋರ್ಟ್ ನೀಡಿದ್ದ ಇಡಿ ಸಮನ್ಸ್‌ಗೆ ನೀಡಿದ್ದ ಮಧ್ಯಂತರ ತಡೆ ಮುಂದುವರೆಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಮತ್ತೆ ಅವರ ಅರ್ಜಿಯನ್ನು ತಿರಸ್ಕರಿಸಿದೆ. ಅಲ್ಲದೇ ನಿನ್ನೆ ನೀಡಿರುವ ಆದೇಶದಲ್ಲಿ ಯಾವುದೇ ಬದಲಾವಣೆ ಮಾಡಲು ಸಾಧ್ಯವಿಲ್ಲ. ಇಂದು[ಶುಕ್ರವಾರ] ನೀವು ಇಡಿ ಮುಂದೆ ವಿಚಾರಣೆಗೆ ಹಾಜರಾಗಬೇಕು ಎಂದಿದೆ. ಹೀಗಾಗಿ ಡಿಕೆ ಶಿವಕುಮಾರ್‌ ಈಗ ಇಡಿ ಖೆಡ್ಡಾದಲ್ಲಿ ಬಿದ್ದು ಒದ್ದಾಡುತ್ತಿದ್ದಾರೆ.

ದೆಹಲಿಯಲ್ಲಿ ಸಿಕ್ಕ ಹಣ ನನ್ನದೇ, ಆದ್ರೆ ತಪ್ಪು ಮಾಡಿಲ್ಲ: ಡಿಕೆಶಿ ಸುದ್ದಿಗೋಷ್ಠಿ ಮುಖ್ಯಾಂಶಗಳು

ವಿಚಾರಣೆಗೆ ಹಾಜರಾಗುವ ಡಿಕೆ ಶಿವಕುಮಾರ್‌ರನ್ನು ಹೆಚ್ಚಿನ ತನಿಖೆಗಾಗಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬಂಧಿಸುವ ಸಾಧ್ಯತೆಗಳಿವೆ. ಹೀಗಾಗಿ ಮುಂದೇನಾಗುತ್ತೆ ಎಂಬುವುದನ್ನು ಕಾದು ನೋಡಬೇಕಷ್ಟೇ. ಸದ್ಯ ಹೈಕೋರ್ಟ್ ಆದೇಶದ ಬೆನ್ನಲ್ಲೇ ಡಿಕೆಶಿ ದೆಹಲಿ ವಿಮಾನವನ್ನೇರಿದ್ದಾರೆ.

ಡಿಕೆಶಿಗೆ ED ಕಂಟಕ: ಟ್ರಬಲ್ ಶೂಟರ್ ಮುಂದಿದೆ 3 ತಂತ್ರ