Asianet Suvarna News Asianet Suvarna News

2 ಸಾವಿರ ರೂ ನೋಟ್ ಬ್ಯಾನ್ ಆಗುತ್ತಾ ? ಈ ಬಗ್ಗೆ ಕೇಂದ್ರ ಸರ್ಕಾರದಿಂದ ಬ್ರೇಕಿಂಗ್ ನ್ಯೂಸ್

ನೋಟುಗಳ ರದ್ದತಿಗೆ ಬದಲಾಗಿ  ನೂತನ 500 ಹಾಗೂ 2000 ರೂ.ಗಳ ನೋಟುಗಳು  66ಎಂಎಂ*150ಎಂಎಂ ಹಾಗೂ 66 ಎಂಎಂ*166ಎಂಎಂ ಅಳತೆಯಲ್ಲಿವೆ

No proposal under consideration to discontinue Rs 2000 note

ನವದೆಹಲಿ(ಮಾ.16): ಕೆಲ ದಿನಗಳಿಂದ ನೂತನ 2 ಸಾವಿರ ರೂ. ನೋಟು ಕೇಂದ್ರ ಸರ್ಕಾರ ರದ್ದುಗೊಳಿಸುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಪುಷ್ಟಿಕರಿಸುವಂತೆ ದೇಶದ ಹಲವಾರು ಕಡೆಯ ಎಟಿಎಂಗಳಲ್ಲಿ ನೋಟು ಸಿಗುತ್ತಿಲ್ಲ.

ಈ ಬಗ್ಗೆ ಸ್ವತಃ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದ್ದು ಈ ರೀತಿಯ ಯಾವುದೇ ಪ್ರಸ್ತಾಪವಿಲ್ಲ ಎಂದು ತಿಳಿಸಿದೆ. ಅಲ್ಲದೆ ದೇಶದ 5 ಸ್ಥಳಗಳಲ್ಲಿ 10 ರೂ.ಗಳ ಪ್ಲಾಸ್ಟಿಕ್ ನೋಟ್'ಗಳನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದು' ಮಾಹಿತಿ ನೀಡಿದೆ.

ಪ್ರಸ್ತುತ ಹಾಗೂ ಭವಿಷ್ಯದಲ್ಲಿ 2 ಸಾವಿರ ನೋಟುಗಳನ್ನು ಹಿಂತೆಗೆದುಕೊಳ್ಳುವ ಪ್ರಸ್ತಾಪವಿಲ್ಲ' ಎಂದು ಕೇಂದ್ರ ಹಣಕಾಸು ರಾಜ್ಯ ಸಚಿವ ಪಿ. ರಾಧಾಕೃಷ್ಣನ್ ಲೋಕಸಭೆಯಲ್ಲಿ ಲಿಖಿತ ಉತ್ತರಿಸಿ, 2016ರ ನವೆಂಬರ್'ನಲ್ಲಿ 500 ಹಾಗೂ 1000 ನೋಟುಗಳ ರದ್ದತಿಗೆ ಬದಲಾಗಿ  ನೂತನ 500 ಹಾಗೂ 2000 ರೂ.ಗಳ ನೋಟುಗಳು  66ಎಂಎಂ*150ಎಂಎಂ ಹಾಗೂ 66 ಎಂಎಂ*166ಎಂಎಂ ಅಳತೆಯಲ್ಲಿವೆ ಎಂದು ತಿಳಿಸಿದರು.

ಪ್ಲಾಸ್ಟಿಕ್ ನೋಟುಗಳನ್ನು ಮೈಸೂರು, ಜೈಪುರ, ಕೊಚ್ಚಿ, ಶಿಮ್ಲಾ ಹಾಗೂ ಭುವನೇಶ್ವರ್'ನ ಮುದ್ರಣ ಕೇಂದ್ರಗಳಲ್ಲಿ ಶೀಘ್ರದಲ್ಲಿಯೇ ಮುದ್ರಿಸಲಾಗುವುದು' ಎಂದು ಹೇಳಿದರು.

Follow Us:
Download App:
  • android
  • ios