2000 ರು. ನೋಟು ಹಿಂದಕ್ಕೆ..? ಸರ್ಕಾರ ಹೇಳೋದೇನು?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 11, Aug 2018, 4:11 PM IST
No Proposal To Withdraw 2000 Notes
Highlights

2000 ರು ನೋಟು ಹಿಂಪಡೆಯುವ ಬಗ್ಗೆ ಈಗಾಗಲೇ ಅನೇಕ ಚರ್ಚೆಗಳಾಗಿದ್ದು ಇದೀಗ ಈ ಬಗ್ಗೆ ಕೇಂದ್ರ ಸರ್ಕಾರವೇ ಸ್ಪಷ್ಟನೆ ನೀಡಿದೆ.

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೋಟ್ ಬ್ಯಾನ್ ಮಾಡಿದ ಬಳಿ ಚಲಾವಣೆಗೆ ಬಂದ 2000 ರು. ನೋಟ್ ಹಿಂಪಡೆಯುವ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. 

ಈ ಹಿಂದೆ ಈ ರೀತಿಯಾಗಿ ಅನೇಕ ಸುದ್ದಿಗಳು ಹರಿದಾಡಿದ್ದು ಆದರೆ ಅಂತಹ ಯಾವುದೇ ರೀತಿಯ ನಿರ್ಧಾರವನ್ನು ಸರ್ಕಾರ ಕೈಗೊಂಡಿಲ್ಲ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ರಾಧಾಕೃಷ್ಣನ್ ಲೋಕಸಭೆಯಲ್ಲಿ ಮಾಹಿತಿ ನೀಡಿದ್ದಾರೆ. 

2016ನೇ ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 500 ಹಾಗೂ 2000 ರು. ಮುಖ ಬೆಲೆಯ ನೋಟುಗಳನ್ನು ಬ್ಯಾನ್ ಮಾಡಿ ಆದೇಶ ಹೊರಡಿಸಿತ್ತು. ಅದಾದ ಬಳಿಕ ನೂತನವಾಗಿ 2000 ರು. ಚಲಾವಣೆಗೆ ತರಲಾಗಿತ್ತು. 

ಅದನ್ನು ವಾಪಸ್ ಪಡೆಯದಿರುವ ಬಗ್ಗೆ ಇದೀಗ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದ್ದು ಅಂತಹ ಯಾವುದೇ ಪ್ರಸ್ತಾವನೆ ಇಲ್ಲ ಎಂದಿದೆ.
 

loader