‘ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಕೆಲ ಶಕ್ತಿಗಳು ಯತ್ನ ಮಾಡುತ್ತಿವೆ. ಮೂರು ತಿಂಗಳಿಂದ ಸರ್ಕಾರ ಬೀಳಲಿದೆ ಎಂದು ಮುಹೂರ್ತ ಫಿಕ್ಸ್ ಮಾಡಿದವರಿಗೆ ನಿರಾಸೆ ಕಾದಿದೆ’ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ. 

ಶಿವಮೊಗ್ಗ: ‘ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಕೆಲ ಶಕ್ತಿಗಳು ಯತ್ನ ಮಾಡುತ್ತಿವೆ. ಮೂರು ತಿಂಗಳಿಂದ ಸರ್ಕಾರ ಬೀಳಲಿದೆ ಎಂದು ಮುಹೂರ್ತ ಫಿಕ್ಸ್ ಮಾಡಿದವರಿಗೆ ನಿರಾಸೆ ಕಾದಿದೆ’ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ. 

ಶುಕ್ರವಾರ ಮಲೆನಾಡು ಕ್ರೆಡಿಟ್ ಕೋ-ಆಪರೇಟಿವ್ ಸೊಸೈ ಟಿಯ ರಜತ ಮಹೋತ್ಸವ ಹಾಗೂ ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, 37 ಸ್ಥಾನ ಪಡೆದ ಜೆಡಿಎಸ್ ಸರ್ಕಾರ ಮಾಡುತ್ತದೆ ಹಾಗೂ ಕುಮಾರಸ್ವಾಮಿ ಮುಖ್ಯಮಂತ್ರಿ ಆಗು ತ್ತಾರೆ ಎಂದು ಯಾರೂ ಊಹಿಸಿರಲಿಲ್ಲ.

ಸ್ವತಃ ನಾನೂ ಯೋಚಿಸಿರಲಿಲ್ಲ. ಇಷ್ಟೆಲ್ಲಾ ಸಾಧನೆಗೂ ದೈವ ಬಲವೇ ಕಾರಣ ಎಂದರು.