ಐಪಿಎಸ್ ಅಕಾರಿಗಳ ಬಡ್ತಿಗೆ ದೈಹಿಕ ಕ್ಷಮತೆ (ಫಿಸಿಕಲ್ ಫಿಟ್ನೆಸ್) ಅನ್ನು ಕಡ್ಡಾಯಗೊಳಿಸಲು ಮುಂದಾಗಿದೆ. ಹೀಗಾದಲ್ಲಿ ಬಡ್ತಿ ಬಯಸುವ ಐಪಿಎಸ್ ಅಕಾರಿಗಳು ಡೊಳ್ಳು ಹೊಟ್ಟೆಯನ್ನು ಇಳಿಸಿಕೊಳ್ಳಬೇಕಾಗುತ್ತದೆ. 

ನವದೆಹಲಿ(ಜು.06): ತೂಕ ಇಳಿಸಿಕೊಳ್ಳುವ ಅಕಾರಿಗಳನ್ನು ಕೇಳಿದಲ್ಲಿಗೆ ವರ್ಗಾವಣೆ ಮಾಡುವ ಯೋಜನೆಯನ್ನು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಅಣ್ಣಾಮಲೈ ಜಾರಿಗೆ ತಂದು ಗಮನ ಸೆಳೆದಿದ್ದರು. ಇದೀಗ ಅದೇ ರೀತಿಯ ಕ್ರಮವೊಂದನ್ನು ಅನುಷ್ಠಾನಕ್ಕೆ ತರಲು ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.

ಐಪಿಎಸ್ ಅಕಾರಿಗಳ ಬಡ್ತಿಗೆ ದೈಹಿಕ ಕ್ಷಮತೆ (ಫಿಸಿಕಲ್ ಫಿಟ್ನೆಸ್) ಅನ್ನು ಕಡ್ಡಾಯಗೊಳಿಸಲು ಮುಂದಾಗಿದೆ. ಹೀಗಾದಲ್ಲಿ ಬಡ್ತಿ ಬಯಸುವ ಐಪಿಎಸ್ ಅಕಾರಿಗಳು ಡೊಳ್ಳು ಹೊಟ್ಟೆಯನ್ನು ಇಳಿಸಿಕೊಳ್ಳಬೇಕಾಗುತ್ತದೆ. ಸದ್ಯ ಇಂತಿಷ್ಟು ವರ್ಷ ಸೇವೆ ಸಲ್ಲಿಸಿದವರಿಗೆ ಬಡ್ತಿ ನೀಡುವ ಪರಿಪಾಠವಿದೆ. ಅದರ ಬದಲಿಗೆ ದೈಹಿಕ ಕ್ಷಮತೆಯನ್ನು ಕಡ್ಡಾಯ ಮಾಡಿ, ಅದನ್ನು ಆಧರಿಸಿಯೇ ಬಡ್ತಿ ನೀಡಬೇಕು ಎಂದು ಕೇಂದ್ರ ಗೃಹ ಇಲಾಖೆ ಶಿಾರಸು ಮಾಡಿತ್ತು. ಈ ಹಿನ್ನೆಲೆಯಲ್ಲಿ ಕರಡು ಸೇವಾ ನಿಯಮಾವಳಿ ಸಿದ್ಧಪಡಿಸಿರುವ ಸಿಬ್ಬಂದಿ ಮತ್ತು ತರಬೇತಿ ಇಲಾಖೆ, ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಅಭಿಪ್ರಾಯ ಬಯಸಿದೆ.