ಯಾರೊಂದಿಗೂ ಮೈತ್ರಿ ಇಲ್ಲ - ಏಕಾಂಗಿಯಾಗಿ ಕಾಂಗ್ರೆಸ್ ಸ್ಪರ್ಧೆ : ಸಿಎಂ

First Published 10, Feb 2018, 8:56 AM IST
No poll alliance with any party Says CM
Highlights

ಪಕ್ಷದ ನಾಯಕಿ ಸೋನಿಯಾ ಗಾಂಧಿ ಹೇಳಿರುವ ಸಮಾನ ಮನಸ್ಕ ಪಕ್ಷಗಳ ಜತೆಗಿನ ಮೈತ್ರಿ ಮಾತು​ಕತೆ ರಾಷ್ಟ್ರ ಮಟ್ಟದ್ದಾಗಿದ್ದು, ರಾಜ್ಯ​ದಲ್ಲಿ ಕಾಂಗ್ರೆಸ್‌ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಸಿಎಂ ಸಿದ್ದ​ರಾ​ಮಯ್ಯ ಸ್ಪಷ್ಟ​ಪ​ಡಿ​ಸಿ​ದರು.

ದಾವ​ಣ​ಗೆರೆ: ಪಕ್ಷದ ನಾಯಕಿ ಸೋನಿಯಾ ಗಾಂಧಿ ಹೇಳಿರುವ ಸಮಾನ ಮನಸ್ಕ ಪಕ್ಷಗಳ ಜತೆಗಿನ ಮೈತ್ರಿ ಮಾತು​ಕತೆ ರಾಷ್ಟ್ರ ಮಟ್ಟದ್ದಾಗಿದ್ದು, ರಾಜ್ಯ​ದಲ್ಲಿ ಕಾಂಗ್ರೆಸ್‌ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಸಿಎಂ ಸಿದ್ದ​ರಾ​ಮಯ್ಯ ಸ್ಪಷ್ಟ​ಪ​ಡಿ​ಸಿ​ದರು.

ಹರಿ​ಹರದಲ್ಲಿ ಶುಕ್ರ​ವಾರ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿ, ಜೆಡಿ​ಎ​ಸ್‌-ಬಿಎ​ಸ್ಪಿ​ ಮೈತ್ರಿ ಆಯಾ ಪಕ್ಷ​ಗ​ಳಿಗೆ ಬಿಟ್ಟವಿಚಾರ. ಆ ಪಕ್ಷ​ಗಳ ಮೈತ್ರಿ ಬಗ್ಗೆ ನಾನು ಪ್ರತಿ​ಕ್ರಿ​ಯಿ​ಸು​ವು​ದಿಲ್ಲ ಎಂದರು.

ಇದೇ ವೇಳೆ, ರಾಜ್ಯದ ಎಲ್ಲಾ 224 ಕ್ಷೇತ್ರ​ದಲ್ಲೂ ಕಾಂಗ್ರೆಸ್‌ ಅಭ್ಯ​ರ್ಥಿ​ಗಳು ಸ್ಪರ್ಧಿ​ಸ​ಲಿದ್ದು, ಮತ್ತೆ ನಮ್ಮ ಸರ್ಕಾ​ರವೇ ಅಸ್ತಿ​ತ್ವಕ್ಕೆ ಬರಲಿದೆ ಎಂಬ ವಿಶ್ವಾ​ಸ​ ವ್ಯಕ್ತ​ಪ​ಡಿ​ಸಿದರು.

ಚುನಾ​ವಣೆ ಹಿನ್ನೆ​ಲೆ​ಯಲ್ಲಿ ಪ್ರಧಾನಿ ಮೋದಿ ಕೇವಲ ಕರ್ನಾ​ಟ​ಕ​ವ​ನ್ನಷ್ಟೇ ಟಾರ್ಗೆಟ್‌ ಮಾಡಿ​ಕೊಂಡಿ​ದ್ದಾರೆ. ಆದರೆ, ನಾವು ಇಡೀ ದೇಶ​ವನ್ನೇ ಟಾರ್ಗೆಟ್‌ ಮಾಡಿ​ಕೊಂಡಿ​ದ್ದೇವೆ. ಸಮೀ​ಕ್ಷೆ​ಯಲ್ಲೂ ಕಾಂಗ್ರೆಸ್‌ ಪಕ್ಷವೇ ಮತ್ತೆ ರಾಜ್ಯ​ದಲ್ಲಿ ಅಧಿಕಾ​ರಕ್ಕೆ ಬರು​ತ್ತ​ದೆಂಬು​ದನ್ನು ಸಾರಿ ಹೇಳಿವೆ ಎಂದು ತಿಳಿ​ಸಿ​ದರು.

loader