ಬೆಂಗಳೂರು (ಮಾ. 12): ಸಾಹಿತಿಗಳಿಗೆ ಕರ್ನಾಟಕ ಭವನದಲ್ಲಿ ರಾತ್ರಿವರೆಗೆ ಪಾರ್ಟಿ ಮಾಡಲು ಬಿಟ್ಟು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಿಂದ ಬೈಸಿಕೊಂಡಿದ್ದ ದಿಲ್ಲಿ ಕರ್ನಾಟಕ ಭವನದ ಸ್ಥಾನಿಕ ಆಯುಕ್ತ ನಿಲಯ್ ಮಿತಾಶ್, ಮೊನ್ನೆ ಚುನಾವಣೆ ಘೋಷಣೆ ಆಗುತ್ತಿದ್ದಂತೆ ಕರ್ನಾಟಕ ಭವನವನ್ನು ರಾಜಕಾರಣಿಗಳಿಗೆ ಬಂದ್ ಮಾಡಿಸಿದ್ದಾರೆ. 

ಸುಮಲತಾ ಅಂಬರೀಶ್ ಗೆ ರಾಕಿಂಗ್ ಸ್ಟಾರ್ ಸಾಥ್!

ಬೆಳಿಗ್ಗೆ 10 ರೊಳಗೆ ರೂಮ್ ಖಾಲಿ ಮಾಡಿ ಎಂದು ಶಾಸಕರಿಗೂ ಫರ್ಮಾನು ಹೊರಡಿಸಿದ್ದರಿಂದ ರಾಜಕಾರಣಿಗಳು ಖಾಸಗಿ ಹೋಟೆಲ್‌ಗಳತ್ತ ಬೆಳಿಗ್ಗೆಯೇ ಬ್ಯಾಗ್ ಹಿಡಿದು ಹೊರಡಬೇಕಾಯಿತು. ಅಷ್ಟೇ ಅಲ್ಲ ಬೆಳಿಗ್ಗೆಯಿಂದ ಸರ್ಕಾರಿ ಕಾರು ಕೂಡ ಕೊಡೋದಿಲ್ಲ ಅಂದಿದ್ದರಿಂದ ಖಾಸಗಿ ಟ್ಯಾಕ್ಸಿಗಳಿಗೆ ಪರದಾಡಬೇಕಾಯಿತು.

ರಷ್ಯಾದಿಂದ ಭಾರತಕ್ಕೆ ಶಸ್ತ್ರಾಸ್ತ್ರ ಆಮದಿನಲ್ಲಿ ಶೇ.42 ರಷ್ಟು ಕುಸಿತ

ಭವನದಲ್ಲಿ ಕುಳಿತಿದ್ದ ಒಬ್ಬ ರಾಜಕಾರಣಿ ಫೋನ್‌ನಲ್ಲಿ ಪಾಲಿಟಿಕ್ಸ್ ಮಾತನಾಡುತ್ತಿದ್ದಾಗ ಬಂದ\ ಕರ್ನಾಟಕ ಭವನದ ನೌಕರನೊಬ್ಬ ‘ಸರ್, ಸಾಹೇಬರು ಸಿಸಿಟಿವಿಯಲ್ಲಿ ನೋಡುತ್ತಿದ್ದಾರೆ. ಇಲ್ಲಿ ನೋ ಪಾಲಿಟಿಕ್ಸ್. ದಯವಿಟ್ಟು ಹೊರಗಡೆ ಹೋಗಿ’ ಎಂದಾಗ ಆ ಶಾಸಕ, ‘ಸರಿಯಪ್ಪ ಈಗ ನಿಮ್ಮದೇ ಕಾಲ’ ಎಂದು ಅಲ್ಲಿಂದ ಹೊರಟೇ ಬಿಟ್ಟರು. 

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್  ಕ್ಲಿಕ್ ಮಾಡಿ