[ವೈರಲ್ ಚೆಕ್] ಆಶಿರ್ವಾದ್ ಗೋದಿ ಹಿಟ್ಟಿನಲ್ಲಿ ಪ್ಲಾಸ್ಟಿಕ್ ಅಂಶ ನಿಜವೇ..?

First Published 27, Mar 2018, 10:17 AM IST
No Plastic In Aashirvaad Atta
Highlights

‘ಆಶೀರ್ವಾದ್’ ಗೋಧಿ ಹಿಟ್ಟಿನಲ್ಲಿ ಪ್ಲಾಸ್ಟಿಕ್ ಅಂಶವಿದೆ ಎಂಬಂತಹ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಈ ವಿಡಿಯೋದಲ್ಲಿ, ಹದಕ್ಕೆ ಕಲಸಿದ ಗೋಧಿಹಿಟ್ಟನ್ನು ನೀರಿನಲ್ಲಿ ತೊಳೆದಾಗ ಕೊನೆಯಲ್ಲಿ ಅಂಟಿನ ಪದಾರ್ಥ ಲಭ್ಯವಾಗುತ್ತದೆ.

‘ಆಶೀರ್ವಾದ್’ ಗೋಧಿ ಹಿಟ್ಟಿನಲ್ಲಿ ಪ್ಲಾಸ್ಟಿಕ್ ಅಂಶವಿದೆ ಎಂಬಂತಹ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಈ ವಿಡಿಯೋದಲ್ಲಿ, ಹದಕ್ಕೆ ಕಲಸಿದ ಗೋಧಿಹಿಟ್ಟನ್ನು ನೀರಿನಲ್ಲಿ ತೊಳೆದಾಗ ಕೊನೆಯಲ್ಲಿ ಅಂಟಿನ ಪದಾರ್ಥ ಲಭ್ಯವಾಗುತ್ತದೆ.

ಅದು ಚೂಯಿಂಗ್‌ಗಮ್‌ನಂತೆಯೇ ಗೋಚರವಾಗುತ್ತದೆ. ಇದೇ ಪ್ಲಾಸ್ಟಿಕ್ ಅಂಶ. ಇದು ಆರೋಗ್ಯಕ್ಕೆ ಮಾರಕ ಎಂದು ತೋರಿಸಲಾಗಿದೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ. ಈ ರೀತಿಯ ಹಲವು ಪ್ರಯೋಗಾತ್ಮಕ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ ನಿಜಕ್ಕೂ ಗೋಧಿ ಹಿಟ್ಟಿನಲ್ಲಿ ಪ್ಲಾಸ್ಟಿಕ್ ಬೆರೆಸಲಾಗಿದೆಯೇ ಎಂದರೆ ಉತ್ತರ ‘ಇಲ್ಲ’. ಏಕೆಂದರೆ ಇದು ಪ್ಲಾಸ್ಟಿಕ್ ಅಂಶ ಅಲ್ಲ. ಎಲ್ಲಾ ವಿಧದ ಗೋಧಿಗಳಲ್ಲಿ ಕಂಡುಬ’ರುವ ಗ್ಲುಟೆನ್ (ಅಂಟು) ನಂತಹ ಪ್ರೊಟೀನ್ ಇದು. ಈ ಬಗ್ಗೆ ‘ಬೂಮ್‌ಲೈವ್’ ತನಿಖೆಗೆ ಮುಂದಾಗಿ ಕೆಲ ಆಹಾರ ತಜ್ಞರ ಬಳಿಯೇ ಸ್ಪಷ್ಟೀಕರಣ ಕೇಳಿದೆ.

‘ಇದು ಅವೈಜ್ಞಾನಿಕ ತಪ್ಪು ಕಲ್ಪನೆಯಾಗಿದ್ದು, ಎಲ್ಲಾ ವಿಧದ ಗೋಧಿಯಲ್ಲಿ ಶೇ.8-10ರಷ್ಟು ಅಂಟಿನ ಅಂಶವಿರುತ್ತದೆ. ಅದನ್ನೇ ತಪ್ಪಾಗಿ ಪ್ಲಾಸ್ಟಿಕ್ ಎಂದು ಬಿಂಬಿಸಲಾಗಿದೆ’ ಎಂದು ಆಹಾರ ತಜ್ಞ ಉದಯ್ ಅನ್ನಾಪುರ್ ಹೇಳಿದ್ದಾರೆ.

ಅಲ್ಲದೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಕೂಡ ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದು, ‘ನಾರಿನಂಶಕ್ಕೆ ಕಾರಣವಾಗುವ ಗ್ಲುಟೆನಿನ್, ಗ್ಲ್ಯಾಡಿನ್ಗಳೆಂಬ ಎರಡು ವಿಧದ ಪ್ರೊಟೀನ್‌ಗಳನ್ನು ಗೋಧಿಯು ಒಳಗೊಂಡಿದ್ದು, ಇವು ಆರೋಗ್ಯಕ್ಕೆ ಹಾನಿಕಾರಕವಲ್ಲ’ ಎಂದು ಹೇಳಿದೆ. ಹಾಗಾಗಿ ಆಶೀರ್ವಾದ್ ಗೋಧಿ ಹಿಟ್ಟಿನಲ್ಲಿ ಪ್ಲಾಸ್ಟಿಕ್ ಅಂಶವಿದೆ ಎಂದು ಹರಿದಾಡುತ್ತಿರುವ ಸುದ್ದಿ ಸುಳ್ಳು.

 

loader