ಈ ವಿಚಾರದಲ್ಲಿ ಸರ್ಕಾರದ ನಿಲುವೇನು ಎಂಬುದನ್ನು ಕೋರ್ಟ್‌ ಕೇಳಿದೆ, ವಕೀಲರು ಇದಕ್ಕೆ ಉತ್ತರಿಸಲಿದ್ದಾರೆ: ಸಿಎಂ
ಮಂಗಳೂರು (ಅ.10): ಗೋಕರ್ಣ ದೇವಸ್ಥಾನವನ್ನು ಸರ್ಕಾರ ವಶಪಡಿಸಿಕೊಳ್ಳುವ ಹಾಗೂ ರಾಮಚಂದ್ರಾಪುರ ಮಠಕ್ಕೆ ಆಡಳಿತಾ ಧಿಕಾರಿ ನೇಮಿಸುವ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಅವರು ಭಾನುವಾರ ಇಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯನ್ವಯ ಈ ವಿಚಾರ ಹೈ ಕೋರ್ಟ್ನಲ್ಲಿದೆ. ಅರ್ಜಿಯಲ್ಲಿ ಏನೇನು ಪ್ರಸ್ತಾಪವಾಗಿದೆ ಎಂಬುದು ನನಗೆ ತಿಳಿದಿಲ್ಲ. ಈ ವಿಚಾರದಲ್ಲಿ ಸರ್ಕಾರದ ನಿಲುವೇನು ಎಂಬುದನ್ನು ಕೋರ್ಟ್ ಕೇಳಿದೆ. ವಕೀಲರು ಇದಕ್ಕೆ ಉತ್ತರಿಸಲಿದ್ದಾರೆ. ನನ್ನ ನಿಲುವನ್ನು ತೀರ್ಮಾನಿಸಿಲ್ಲ ಎಂದು ಸ್ಪಷ್ಟಪಡಿಸಿದರು.
