Asianet Suvarna News Asianet Suvarna News

ಕಿ.ಮೀಗೆ 5 ರೂ. ಸೌಲಭ್ಯವಿರುವ ಟ್ಯಾಕ್ಸಿ ! ಉತ್ತರ ನೀಡಿದ ರಿಲಯನ್ಸ್ ಜಿಯೊ

ಜಿಯೋ ಟೆಲಿಕಾಂ ಸಂಸ್ಥೆ  ಕೇವಲ 170 ದಿನಗಳಲ್ಲಿ  10 ಕೋಟಿ ಅಧಿಕೇತ ಗ್ರಾಹಕರನ್ನು ಹೊಂದಿದೆ. ಈಗಾಗಲೇ ತಮ್ಮ ಗ್ರಾಹಕರಿಗೆ 6 ತಿಂಗಳು ಉಚಿತ ಇಂಟರ್'ನೆಟ್' ಕರೆ, ಸಂದೇಶ ಮುಂತಾದ ಸೌಲಭ್ಯ ನೀಡಿದೆ.

No plans to launch app based taxi service clarifies Reliance

ಮುಂಬೈ(ಫೆ.25): ಆ್ಯಪ್ ಆಧಾರಿತ ಟ್ಯಾಕ್ಸಿಗಳಾದ ಊಬರ್ ಹಾಗೂ ಓಲಾ'ಗೆ ಸೆಡ್ಡು ಹೊಡೆಯಲು ಮುಖೇಶ್ ಅಂಬಾನಿ ರಿಲಾಯನ್ಸ್ ಸಂಸ್ಥೆ ಶೀಘ್ರದಲ್ಲಿಯೇ ಪ್ರತಿ ಕಿ.ಮೀಗೆ ಕೇವಲ 5 ರೂ.ಗಳಿಗೆ ಸೌಲಭ್ಯ ಒದಗಿಸುತ್ತದೆ ಎಂಬ ಸುದ್ದಿ ಎಲ್ಲಡೆ ಹರಡಿದೆ.

ಈ ಬಗ್ಗೆ ಟ್ವಿಟ್ಟ'ರ್'ನಲ್ಲಿ ಸ್ಪಷ್ಟನೆ ನೀಡಿರುವ ರಿಲಯನ್ಸ್ ಸಂಸ್ಥೆಯ ವಕ್ತಾರರು ಈ ರೀತಿಯ ಯಾವುದೇ ಯೋಜನೆಯನ್ನು ನಾವು ಆರಂಭಿಸುತ್ತಿಲ್ಲ. ಇದು ಸಂಪೂರ್ಣ ಸುಳ್ಳು ಹಾಗೂ ನಿರಾಧಾರವಾದುದು' ಎಂದು ಪ್ರತಿಕ್ರಯಿಸಿದ್ದಾರೆ. ಸಾರ್ವಜನಿಕರು ಬೇಕಿದ್ದರೆ  ಜಿಯೋ ವಾಲೆಟ್ ಮೂಲಕ ಆ್ಯಪ್ ಆಧಾರಿತ ಊಬರ್ ಹಾಗೂ ಓಲಾ ಟ್ಯಾಕ್ಸಿ ಬಳಸಿಕೊಳ್ಳಬಹುದು' ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಯೋ ಟೆಲಿಕಾಂ ಸಂಸ್ಥೆ  ಕೇವಲ 170 ದಿನಗಳಲ್ಲಿ  10 ಕೋಟಿ ಅಧಿಕೇತ ಗ್ರಾಹಕರನ್ನು ಹೊಂದಿದೆ. ಈಗಾಗಲೇ ತಮ್ಮ ಗ್ರಾಹಕರಿಗೆ 6 ತಿಂಗಳು ಉಚಿತ ಇಂಟರ್'ನೆಟ್' ಕರೆ, ಸಂದೇಶ ಮುಂತಾದ ಸೌಲಭ್ಯ ನೀಡಿದೆ.ಮುಂದಿನ 12 ತಿಂಗಳು  99 ರೂ.ಗಳಿಗೆ ಉಚಿತ ಕರೆ ಸೌಲಭ್ಯವನ್ನು  ನೀಡಿದ್ದು, ಪ್ರತಿ ತಿಂಗಳು 303 ರೂ. ಪಾವತಿಸಿದರೆ ಅನಿಯಮಿತ ಇಂಟರ್'ನೆಟ್', ಕರೆ, ಮುಂತಾದ ಸೇವೆ ಒದಗಿಸಲಿದೆಯಂತೆ.

Latest Videos
Follow Us:
Download App:
  • android
  • ios