ಉಲ್ಟಾಹೊಡೆದ ಕೇಂದ್ರ ಸರ್ಕಾರ

First Published 28, Mar 2018, 9:29 AM IST
No plan to scrap Article 370
Highlights

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ದಯಪಾಲಿಸಿರುವ 370ನೇ ಪರಿಚ್ಛೇದವನ್ನು ರದ್ದುಗೊಳಿಸುವ ಪ್ರಸ್ತಾಪ ಸದ್ಯಕ್ಕೆ ತನ್ನ ಮುಂದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ನವದೆಹಲಿ: ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ದಯಪಾಲಿಸಿರುವ 370ನೇ ಪರಿಚ್ಛೇದವನ್ನು ರದ್ದುಗೊಳಿಸುವ ಪ್ರಸ್ತಾಪ ಸದ್ಯಕ್ಕೆ ತನ್ನ ಮುಂದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

370ನೇ ಪರಿಚ್ಛೇದವನ್ನು ತಾನು ಅಧಿಕಾರಕ್ಕೆ ಬಂದರೆ ರದ್ದು ಮಾಡುವುದಾಗಿ ಬಿಜೆಪಿ ಚುನಾವಣಾ ಪ್ರಚಾಳಿಕೆಯಲ್ಲಿತ್ತು. ಆದರೆ ಸರ್ಕಾರದ ಈ ಉತ್ತರ ನೋಡಿದರೆ ತನ್ನ ನಿಲುವಿನಿಂದ ಬಿಜೆಪಿ ಯೂ ಟರ್ನ್‌ ತೆಗೆದುಕೊಂಡಂತೆ ಕಾಣುತ್ತಿದೆ.

ಮಂಗಳವಾರ ಲೋಕಸಭೆಯಲ್ಲಿ ಬಿಜೆಪಿ ಸದಸ್ಯ ಅಶ್ವಿನಿ ಕುಮಾರ್‌ ಅವರು ‘ಸಂವಿಧಾನದ ಪರಿಚ್ಛೇದ 370ನ್ನು ರದ್ದುಗೊಳಿಸಲು ಯಾವ ಕ್ರಮ ಜರುಗಿಸಿದ್ದೀರಿ? ರದ್ದತಿ ಪ್ರಕ್ರಿಯೆ ಯಾವ ಹಂತದಲ್ಲಿದೆ?’ ಎಂದು ಪ್ರಶ್ನಿಸಿದರು. ಆಗ ಉತ್ತರಿಸಿದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಹಂಸರಾಜ್‌ ಅಹಿರ್‌, ‘ಸದ್ಯಕ್ಕೆ ಅಂಥ ಯಾವುದೇ ಪ್ರಸ್ತಾಪ ಇಲ್ಲ’ ಎಂದು ಏಕಸಾಲಿನ ಉತ್ತರ ನೀಡಿದರು.

loader