ಮಕ್ಕಳಿಲ್ಲದ ದಂಪತಿಗಳಿಗೆ ದತ್ತು ತೆಗೆದುಕೊಳ್ಳುವುದು ವರದಾನವಾಗಿದೆ. ಇದೀಗ ದತ್ತು ತೆಗೆದುಕೊಳ್ಳುವ ಆಯ್ಕೆ ಪ್ರಕ್ರಿಯೆಯಲ್ಲಿ ಬದಲಾವಣೆಯಾಗಲಿದೆ. ರಾಷ್ಟ್ರೀಯ ದತ್ತು ಪ್ರಾಧಿಕಾರವು ಆಫರ್ ಮಾಡುವ ಮಗುವನ್ನು 48 ಗಂಟೆಯೊಳಗೆ ಸ್ವೀಕರಿಸಲು ಒಪ್ಪಿಗೆ ನೀಡಬೇಕು ಅಥವಾ ನಿರಾಕರಿಸಬೇಕು. ಈ ಹೊಸ ನೀತಿ ಸೋಮವಾರದಿಂದ ಜಾರಿಯಾಗಲಿದೆ.
ನವದೆಹಲಿ (ಏ.30): ಮಕ್ಕಳಿಲ್ಲದ ದಂಪತಿಗಳಿಗೆ ದತ್ತು ತೆಗೆದುಕೊಳ್ಳುವುದು ವರದಾನವಾಗಿದೆ. ಇದೀಗ ದತ್ತು ತೆಗೆದುಕೊಳ್ಳುವ ಆಯ್ಕೆ ಪ್ರಕ್ರಿಯೆಯಲ್ಲಿ ಬದಲಾವಣೆಯಾಗಲಿದೆ. ರಾಷ್ಟ್ರೀಯ ದತ್ತು ಪ್ರಾಧಿಕಾರವು ಆಫರ್ ಮಾಡುವ ಮಗುವನ್ನು 48 ಗಂಟೆಯೊಳಗೆ ಸ್ವೀಕರಿಸಲು ಒಪ್ಪಿಗೆ ನೀಡಬೇಕು ಅಥವಾ ನಿರಾಕರಿಸಬೇಕು. ಈ ಹೊಸ ನೀತಿ ಸೋಮವಾರದಿಂದ ಜಾರಿಯಾಗಲಿದೆ.
ಇಲ್ಲಿಯವರೆಗೆ ಪೋಷಕರು ಸರ್ಕಾರಿ ದತ್ತು ಪೋರ್ಟಲ್ ಕೇರಿಂಗ್ ನಲ್ಲಿ ನೊಂದಣಿ ಮಾಡಬೇಕು. ಅವರು 3 ಮಕ್ಕಳನ್ನು ಸೂಚಿಸುತ್ತಾರೆ. ಅದರಲ್ಲಿ ಒಂದು ಮಗುವನ್ನು ಪೋಷಕರು ಆಯ್ಕೆ ಮಾಡಿಕೊಳ್ಳಬೇಕಿತ್ತು. ಈಗ ಮೂರು ಮಕ್ಕಳ ಬದಲಿಗೆ ಒಂದೇ ಮಗುವನ್ನು ತೋರಿಸಲಾಗುತ್ತದೆ.
ದತ್ತು ತೆಗೆದುಕೊಳ್ಳುವ ಪ್ರಮಾಣವು ಬಹಳ ನಿಧಾನವಾಗಿದೆ. ಬಹಳಷ್ಟು ಮಕ್ಕಳು ದೀರ್ಘಕಾಲದವರೆಗೆ ಹಾಗೇ ಉಳಿದು ಹೋಗುತ್ತಾರೆ. ಹಾಗಾಗಿ ಹೊಸ ನೀತಿಯನ್ನು ಜಾರಿಗೊಳಿಸಲಿದ್ದೇವೆ. ಇದರಿಂದ ಎಲ್ಲಾ ಮಕ್ಕಳನ್ನು ಶಿಫಾರಸ್ಸು ಮಾಡಲು ಸಾಧ್ಯವಾಗುತ್ತದೆ. ಮಗುವಿನ ಪ್ರೊಫೈಲ್ ಕಳುಹಿಸಿದ 48 ಗಂಟೆಗಳಲ್ಲಿ ಪೋಷಕರು ಸಮ್ಮತಿ/ಅಸಮ್ಮತಿ ಸೂಚಿಸಬೇಕು ಎಂದು ಮಕ್ಕಳ ದತ್ತು ಸಂಪನ್ಮೂಲ ಪ್ರಾಧಿಕಾರದ ಸಿಇಒ ದೀಪಕ್ ಕುಮಾರ್ ಹೇಳಿದ್ದಾರೆ.
