ಬಿಎಸ್‌ಪಿ ವರಿಷ್ಠೆ ಮಾಯಾವತಿ ಇನ್ನು 20 ರಿಂದ 22   ವರ್ಷಗಳ ಕಾಲ ತಾವೇ ಪಕ್ಷದ ಅಧ್ಯಕ್ಷ ಹುದ್ದೆಯಲ್ಲಿ ಮುಂದುವರಿಯುವುದಾಗಿ  ಘೋಷಿಸಿಕೊಂಡಿದ್ದಾರೆ.  

ಲಖನೌ: ಬಿಎಸ್‌ಪಿ ವರಿಷ್ಠೆ ಮಾಯಾವತಿ ಇನ್ನು 20 ರಿಂದ 22 ವರ್ಷಗಳ ಕಾಲ ತಾವೇ ಪಕ್ಷದ ಅಧ್ಯಕ್ಷ ಹುದ್ದೆಯಲ್ಲಿ ಮುಂದುವರಿಯುವುದಾಗಿ ಘೋಷಿಸಿಕೊಂಡಿದ್ದಾರೆ. 

ಈ ಸಂಬಂಧ ಅವರು ಪಕ್ಷದ ಸಂವಿಧಾನಕ್ಕೆ ತಿದ್ದುಪಡಿ ಮಾಡಿದ್ದಾರೆ. ಈ ತಿದ್ದುಪಡಿ ಅನ್ವಯ, ಮಾಯಾವತಿ ಅವರ ಸೋದರ ಪಕ್ಷದ ಉಪಾಧ್ಯಕ್ಷನಾಗಿ ಮುಂದುವರಿ ಯಲು ಅವಕಾಶ ನಿರಾಕರಿಸಲಾಗಿದೆ. 

ಆದರೆ ಮಾಯಾವತಿ ಹುದ್ದೆಯಲ್ಲಿ ಮುಂದು ವರೆಯಲು ಅವಕಾಶ ಮಾಡಿಕೊಡಲಾಗಿದೆ. ಅದರಂತೆ ಪಕ್ಷದ ಮುಖಂಡರ ಸ್ಥಾನದಲ್ಲಿ ಇನ್ನಾವುದೇ ರೀತಿಯ ಬದಲಾವಣೆಯನ್ನೂ ಮಾಡುವುದಿಲ್ಲ. ಯಾರೂ ಕೂಡ ನನ್ನ ಸ್ಥಾನಕ್ಕೆ ಏರುವ ಬಗ್ಗೆ ಕನಸು ಕಾಣಬೇಡಿ ಎಂದಿದ್ದಾರೆ.