2008ರಲ್ಲಿ ನಂಜನಗೂಡು ಸಾಮಾನ್ಯದಿಂದ ಮೀಸಲು ಕ್ಷೇತ್ರವಾಗಿ ಪರಿವರ್ತನೆಯಾದ ಮೇಲೆ ಗೆದ್ದಿದ್ದ ವಿ.ಶ್ರೀನಿವಾಸಪ್ರಸಾದ್‌ ಅವರು 2013ರಲ್ಲಿ ಪುನರ್‌ ಆಯ್ಕೆಯಾಗಿದ್ದರು.

ಮೈಸೂರು(ಏ.14): ನಂಜನಗೂಡು ಕ್ಷೇತ್ರದಲ್ಲಿ 1952ರಿಂದ ಈವರೆಗೆ ಯಾರೂ ಸತತ ಮೂರು ಚುನಾವಣೆಗಳಲ್ಲಿ ಜಯ ಸಾಧಿಸಿಲ್ಲ. 1952 ರಿಂದ 1967ರವರೆಗೆ ಒಮ್ಮೆ ಗೆದ್ದವರು ಮತ್ತೆ ಗೆದ್ದಿರಲಿಲ್ಲ. 1972ರಲ್ಲಿ ಆಯ್ಕೆಯಾದ ಕೆ.ಬಿ. ಶಿವಯ್ಯ 1978ರಲ್ಲಿ ಪುನರ್‌ ಆಯ್ಕೆಯಾಗಿ ದಾಖಲೆ ಮಾಡಿದ್ದರು. ಇದಾದ ನಂತರ ಎಂ.ಮಹದೇವ್‌ ಹಾಗೂ ಡಿ.ಟಿ.ಜಯಕುಮಾರ್‌ ಸರದಿ ಮೇಲೆ ತಲಾ 3 ಬಾರಿ ಗೆದ್ದಿದ್ದರು. 2008ರಲ್ಲಿ ನಂಜನಗೂಡು ಸಾಮಾನ್ಯದಿಂದ ಮೀಸಲು ಕ್ಷೇತ್ರವಾಗಿ ಪರಿವರ್ತನೆಯಾದ ಮೇಲೆ ಗೆದ್ದಿದ್ದ ವಿ.ಶ್ರೀನಿವಾಸಪ್ರಸಾದ್‌ ಅವರು 2013ರಲ್ಲಿ ಪುನರ್‌ ಆಯ್ಕೆಯಾಗಿದ್ದರು. ಈ ಬಾರಿಯ ಉಪ ಚುನಾವಣೆಯಲ್ಲಿ ಶ್ರೀನಿವಾಸಪ್ರಸಾದ್‌ ಅವರು ಸೋಲುವ ಮೂಲಕ ಈ ಕ್ಷೇತ್ರದಲ್ಲಿ ಯಾರಿಗೂ ಹ್ಯಾಟ್ರಿಕ್‌ ಜಯ ಸಿಕ್ಕಿಲ್ಲ ಎಂಬುದು ಸಾಬೀತಾಗಿದೆ.