ಗದಗ : ಶಂಕಿತ ವ್ಯಕ್ತಿಯಲ್ಲಿ ನಿಪಾ ಪತ್ತೆಯಾಗಿಲ್ಲ

First Published 26, May 2018, 10:22 AM IST
No Nipah Virus infection in SagarGadag
Highlights

ಈಗಾಗಲೇ ಕೇರಳದಲ್ಲಿ ಮರಣ ಮೃದಂಗ ಭಾರಿಸುತ್ತಿರುವ ನಿಪಾ ವೈರಸ್ ಶಂಕೆ ಗದಗದಲ್ಲಿ ತನ್ನ ಭೀತಿ ಮೂಡಿಸಿತ್ತು. ಆದರೆ ಇಲ್ಲಿ ಅನಾರೋಗ್ಯಕ್ಕೀಡಾದ ವ್ಯಕ್ತಿಯಲ್ಲಿ  ನಿಪಾ ವೈರಸ್ ಪತ್ತೆಯಾಗಿಲ್ಲ ಎಂದು ಆರೋಗ್ಯಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. 

ಗದಗ(ಮೇ 26) : ಈಗಾಗಲೇ ಕೇರಳದಲ್ಲಿ ಮರಣ ಮೃದಂಗ ಭಾರಿಸುತ್ತಿರುವ ನಿಪಾ ವೈರಸ್ ಶಂಕೆ ಗದಗದಲ್ಲಿ ತನ್ನ ಭೀತಿ ಮೂಡಿಸಿತ್ತು. ಆದರೆ ಅಲ್ಲಿನ ಶಂಕಿತ ವ್ಯಕ್ತಿಯಲ್ಲಿ ನಿಪಾ ವೈರಸ್ ಪತ್ತೆಯಾಗಿಲ್ಲ ಎಂದು ಆರೋಗ್ಯಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. 

ಗದಗ ಜಿಮ್ಸ್ ಆಸ್ಪತ್ರೆಗೆ ಅನಾರೋಗ್ಯದಿಂದ ದಾಖಲಾದ ವ್ಯಕ್ತಿಗೆ ನಿಪಾ ವೈರಸ್ ಸೋಂಕು ತಗುಲಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ  ಪುಣೆಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವೈರಲಜಿ ಲ್ಯಾಬ್ ಗೆ ರಕ್ತ ಪರೀಕ್ಷೆಗೆಂದು ಕಳಿಸಲಾಗಿದ್ದು, ಇದೀಗ ಲ್ಯಾಬ್ ನಿಂದ ನೀಡಿದ ವರದಿಯಲ್ಲಿ ನೆಗೆಟಿವ್ ರಿಸಲ್ಟ್ ಬಂದಿದೆ. 

ಗದಗ ಜಿಲ್ಲೆ ರೋಣ ತಾಲೂಕಿನ  ಈ ವ್ಯಕ್ತಿಗೆ ನಿಪಾ ಶಂಕೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿತ್ತು.  ಕಳೆದ 6 ತಿಂಗಳಿನಿಂದ ಈ ವ್ಯಕ್ತಿ ಕೇರಳದಲ್ಲಿ ಕೆಲಸ ಮಾಡುತ್ತಿದ್ದ.  ಇದೀಗ ಗದಗಕ್ಕೆ ಆಗಮಿಸಿದ್ದ ವ್ಯಕ್ತಿಯಲ್ಲಿ ಏಕಾಏಕಿ ಕೆಮ್ಮು, ಜ್ವರ ಕಾಣಿಸಿಕೊಂಡಿದ್ದರಿಂದ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.  

ಆದರೆ ಇದೀಗ ವ್ಯಕ್ತಿಯಲ್ಲಿ ನಿಪಾ ನೆಗೆಟಿವ್ ಎಂದು ಬಂದಿದೆ ಎಂದು  ಜಿಮ್ಸ್ ನಿರ್ದೇಶಕ ಪಿ ಎಸ್ ಭೂಸರೆಡ್ಡಿ ಮಾಹಿತಿ ನೀಡಿದ್ದಾರೆ. 

loader