ದೂರವಾದ ಆತಂಕ; ಕರಾವಳಿಯಲ್ಲಿ ‘ನಿಫಾ’ ಇಲ್ಲ

First Published 24, May 2018, 8:02 PM IST
No Nipah in Mangaluru Says Test Reports
Highlights
  • ನಿಫಾ ಸೋಂಕು ಪತ್ತೆಯ 2 ಪ್ರಕರಣಗಳೂ ನೆಗೆಟಿವ್
  • ರೋಗಿಗಳಿಗೆ ನಿಫಾ ಜ್ವರ ಇಲ್ಲ  ಜಿಲ್ಲಾಧಿಕಾರಿ ಹೇಳಿಕೆ

ಮಂಗಳೂರು: ಕಳೆದ ಕೆಲವು ದಿನಗಳಿಂದ ರಾಜ್ಯದ ಜನರಿಗೆ ಕಾಡಿದ್ದ  ಬಹುದೊಡ್ಡ ಆತಂಕ ಇದೀಗ ದೂರವಾಗಿದೆ. ಮಂಗಳೂರಿನಲ್ಲಿ ಕಳೆದ ಮಂಗಳವಾರ ಪತ್ತೆಯಾಗಿದ್ದ ಶಂಕಿತ ನಿಫಾ ಸೋಂಕು ಪ್ರಕರಣಗಳ ಬಗ್ಗೆ  ಪ್ರಯೋಗಾಲಯದ ವರದಿ ಇದೀಗ ಬಹಿರಂಗವಾಗಿದೆ.

ಆ ಎರಡೂ ಪ್ರಕರಣಗಳು ನೆಗೆಟಿವ್ ಎಂದು ಪ್ರಯೋಗಾಲಯ ವರದಿ ಹೇಳಿದೆ. ಶಂಕಿತ ಪ್ರಕರಣಗಳ ರೋಗಿಗಳಿಗೆ ನಿಫಾ ಜ್ವರ ಇಲ್ಲ ಎಂಬುದಾಗಿ ಜಿಲ್ಲಾಧಿಕಾರಿ ಹೇಳಿದ್ದಾರೆ. 

ಮಂಗಳೂರು ಹಾಗೂ ಕೇರಳದ ಮೂಲದ ವ್ಯಕ್ತಿಗಳಿಬ್ಬರಿಗೆ ನಿಫಾ ಸೋಂಕು ತಗಲಿದೆಯೆಂದು ಶಂಕಿಸಲಾಗಿತ್ತು. ಇಬ್ಬರು ರೋಗಿಗಳ ರಕ್ತದ ಮಾದರಿಯನ್ನು ಸಂಗ್ರಹಿಸಿದ ಜಿಲ್ಲಾ ಆರೋಗ್ಯ ಇಲಾಖೆಯು ಹೆಚ್ಚಿನ ಪರೀಕ್ಷೆಗಾಗಿ ಮಣಿಪಾಲ ಆಸ್ಪತ್ರೆಗೆ ಕಳುಹಿಸಿತ್ತು. 

ಕೇರಳದಲ್ಲಿ ಕಳೆದ ವಾರ ಮೊದಲು ಪತ್ತೆಯಾದ ಬಾವಲಿ ಜ್ವರವು  ಈಗಾಗಲೇ ಸುಮಾರು 12 ಮಂದಿ ಮೃತಪಟ್ಟಿದ್ದಾರೆ. ಸೋಂಕು ಹರಡುವ ಭೀತಿಯಿಂದ ಕರ್ನಾಟಕದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.

ನಿಫಾ ವೈರಸ್ ಮೊದಲ ಬಾರಿಗೆ 1998ರಲ್ಲಿ  ಮಲೇಶಿಯಾದಲ್ಲಿ ಪತ್ತೆಯಾಗಿತ್ತು. ಆಗ 100ಕ್ಕೂ ಹೆಚ್ಚು ಮಂದಿ ಈ ಸೋಂಕಿನಿಂದ ಸಾವನಪ್ಪಿದ್ದರು. 2001ರಲ್ಲಿ ಭಾರತದ ಬಾಂಗ್ಲಾದೇಶದಲ್ಲಿ ಕಾಣಿಸಿಕೊಂಡಿದ್ದರೆ  2004ರಲ್ಲಿ ಬಾಂಗ್ಲಾದೇಶದಲ್ಲಿ ಉಲ್ಬಣಿಸಿತ್ತು. 

loader