2018ರ ಜ.1ರಂದು ಹೊಸ ವರ್ಷಾಚರಣೆ ಹೆಸರಲ್ಲಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ರದ್ದು ತೆಲುಗು ಕ್ಯಾಲೆಂಡರ್ ಪ್ರಕಾರ, ಯುಗಾದಿಯೇ ನೂತನ ವರ್ಷದ ಆರಂಭದ ದಿನ

ಹೈದರಾಬಾದ್: 2018ರ ಜ.1ರಂದು ಹೊಸ ವರ್ಷಾಚರಣೆ ಹೆಸರಲ್ಲಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮತ್ತು ದೇವಸ್ಥಾನಕ್ಕೆ ಅಲಂಕಾರ ಮಾಡುವ ಪದ್ಧತಿಯನ್ನು ರದ್ದು ಮಾಡುವಂತೆ ರಾಜ್ಯದ ದೇವಸ್ಥಾನಗಳಿಗೆ ಆಂಧ್ರಪ್ರದೇಶ ಸರ್ಕಾರ ಸೂಚಿಸಿದೆ.

ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 70 ವರ್ಷ ಕಳೆದ ಹೊರತಾಗಿಯೂ, ದೇವಸ್ಥಾನಗಳು ಕ್ರೈಸ್ತರ ಸಂಪ್ರದಾಯ ಪಾಲಿಸುತ್ತಿವೆ. ತೆಲುಗು ಕ್ಯಾಲೆಂಡರ್ ಪ್ರಕಾರ, ಯುಗಾದಿಯೇ ನೂತನ ವರ್ಷದ ಆರಂಭದ ದಿನ. ಹೀಗಾಗಿ ಜ.1ರಂದು ದೇವಸ್ಥಾನಗಳಲ್ಲಿ ಹೊಸ ವರ್ಷಾಚರಣೆ ಮಾಡಕೂಡದು ಎಂದು ಆಂಧ್ರಪ್ರದೇಶದ ಹಿಂದೂ ಧರ್ಮ ಪ್ರಚಾರ ಪರಿಷತ್ ಪ್ರತಿಪಾದಿಸಿದೆ.