ಅಭ್ಯರ್ಥಿಗಳು 25 ವಯಸ್ಸು ಮೀರಿರಬಾರದು. ನೀಟ್‌ ಅಭ್ಯರ್ಥಿಗಳ ಕನಿಷ್ಠ ವಯಸ್ಸು 17 ಮತ್ತು ಗರಿಷ್ಠ 25 ಆಗಿರಬೇಕೆಂದು ವಿಶ್ವವಿದ್ಯಾಲ​ಯಗಳ ಅನುದಾನ ಆಯೋಗ (ಯುಜಿಸಿ)ದ ಸಭೆಯಲ್ಲಿ ನಿರ್ಧರಿಸಲಾಗಿದೆ.

ನವದೆಹಲಿ(ಜ.26): ವೈದ್ಯಕೀಯ ಶಿಕ್ಷಣ ಆಕಾಂಕ್ಷಿಗಳು ಇನ್ನು ಮುಂದೆ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ(ನೀಟ್‌)ಯನ್ನು ಕೇವಲ ಮೂರು ಪ್ರಯತ್ನದೊಳಗೆ ಪೂರ್ಣಗೊಳಿಸಬೇಕು. ಅಲ್ಲದೆ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿದ ಪ್ರವೇಶ ಪರೀಕ್ಷೆ ಬರೆಯ​ಬೇಕಾದರೆ, ಅಭ್ಯರ್ಥಿಗಳು 25 ವಯಸ್ಸು ಮೀರಿರಬಾರದು. ನೀಟ್‌ ಅಭ್ಯರ್ಥಿಗಳ ಕನಿಷ್ಠ ವಯಸ್ಸು 17 ಮತ್ತು ಗರಿಷ್ಠ 25 ಆಗಿರಬೇಕೆಂದು ವಿಶ್ವವಿದ್ಯಾಲ​ಯಗಳ ಅನುದಾನ ಆಯೋಗ (ಯುಜಿಸಿ)ದ ಸಭೆಯಲ್ಲಿ ನಿರ್ಧರಿಸಲಾಗಿದೆ. ಆದರೆ ಮೀಸಲು ವಿಭಾಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 30 ಆಗಿರುತ್ತದೆ. ಇಲ್ಲಿವರೆಗೆ ನೀಟ್‌ ಬರೆಯಲು ವಯೋಮಿತಿ ಇರಲಿಲ್ಲ ಮತ್ತು ಗರಿಷ್ಠ ಪ್ರಯತ್ನದ ಸಂಖ್ಯೆ ನಿಗದಿಯಾಗಿರಲಿಲ್ಲ. ಇದೊಂದು ಉತ್ತಮ ನಿರ್ಧಾರ ಎಂದು ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ನಿರ್ದೇಶನಾಲಯದ ನಿರ್ದೇಶಕ ಪ್ರವೀಣ್‌ ಶಿಂಗಾರೆ ಹೇಳಿದ್ದಾರೆ. ಪರೀಕ್ಷೆಯಲ್ಲಿ ಯಶಸ್ವಿ ಯಾಗದಾಗ, ಕೆಲವರು ಬಿಎಸ್ಸಿ ಪದವಿಗೆ ಸೇರ್ಪಡೆಯಾಗುತ್ತಾರೆ. ಆದರೆ ಪ್ರತಿ ವರ್ಷ ಪರೀಕ್ಷೆ ಬರೆಯುತ್ತಲೇ ಇರುತ್ತಾರೆ ಎಂದು ಅವರು ತಿಳಿಸಿದ್ದಾರೆ. ಇನ್ನೊಂದೆಡೆಯಲ್ಲಿ ಪ್ರತಿ ವರ್ಷದ ಪರೀಕ್ಷೆಯ ವಿಧಾನದಲ್ಲಾಗುವ ಬದಲಾವಣೆಗಳನ್ನು ಅರ್ಥೈಸಲು ಕೋಚಿಂಗ್‌ ಕ್ಲಾಸ್‌ಗಳ ಉಪನ್ಯಾಸಕರು ಕೂಡ ಪ್ರವೇಶ ಪರೀಕ್ಷೆ ಬರೆಯುತ್ತಾರೆ. ಇದೀಗ ಈ ನಿರ್ಧಾರದಿಂದ ಇಂಥವರನ್ನೂ ತಡೆಯಬಹುದಾಗಿದೆ.