ಸಾಮಾನ್ಯ ಲೈಸನ್ಸ್‌ ಹೊಂದಿದ ವಾಹನ ಚಾಲಕರಿಗೂ ಟ್ಯಾಕ್ಸಿ ಮತ್ತು ವಾಣಿಜ್ಯ ಉದ್ದೇಶಕ್ಕಾಗಿ ಸಣ್ಣ ಗಾತ್ರದ ವಾಹನ(ಎಲ್‌ಎಂವಿ)ಗಳ ಚಾಲನೆಗೆ ಅನುಮತಿ ನೀಡುವ ಮೂಲಕ ಸುಪ್ರೀಂ ಕೋರ್ಟ್‌ ಆದೇಶ ಪಾಲನೆ ಮಾಡಲು ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.

ನವದೆಹಲಿ: ಸಾಮಾನ್ಯ ಲೈಸನ್ಸ್‌ ಹೊಂದಿದ ವಾಹನ ಚಾಲಕರಿಗೂ ಟ್ಯಾಕ್ಸಿ ಮತ್ತು ವಾಣಿಜ್ಯ ಉದ್ದೇಶಕ್ಕಾಗಿ ಸಣ್ಣ ಗಾತ್ರದ ವಾಹನ(ಎಲ್‌ಎಂವಿ)ಗಳ ಚಾಲನೆಗೆ ಅನುಮತಿ ನೀಡುವ ಮೂಲಕ ಸುಪ್ರೀಂ ಕೋರ್ಟ್‌ ಆದೇಶ ಪಾಲನೆ ಮಾಡಲು ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.

ಆದರೆ, ಟ್ರಕ್‌, ಬಸ್ಸು ಮತ್ತು ಇತರ ಮಧ್ಯಮ ಹಾಗೂ ಬೃಹತ್‌ ಗಾತ್ರದ ವಾಹನಗಳ ಚಾಲನೆಗೆ ಕಮರ್ಷಿಯಲ್‌ ಡ್ರೈವಿಂಗ್‌ ಲೈಸನ್ಸ್‌ ಹೊಂದಬೇಕೆಂಬ ನಿಯಮ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ.

ಕಾರು ಮತ್ತು ಇತರ ಸಣ್ಣ ವಾಹನಗಳನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸಲಾಗುತ್ತಿದ್ದರೂ, ಅದರ ಚಾಲಕ ಸಾಮಾನ್ಯ ಲೈಸನ್ಸ್‌ ಹೊಂದಿದ್ದರೆ, ಸಾಕು. ಬೇರೆ ಯಾವುದೇ ಸಮ್ಮತಿ ಪಡೆಯುವ ಅಗತ್ಯವಿಲ್ಲ ಎಂದು ಕೇಂದ್ರ ಸಾರಿಗೆ ಸಚಿವಾಲಯ ತಿಳಿಸಿದೆ. ಪ್ರಸ್ತುತ ಟ್ಯಾಕ್ಸಿ ಮತ್ತು ವಾಣಿಜ್ಯ ಉದ್ದೇಶಕ್ಕಾಗಿ ಯಾವುದೇ ವಾಹನ ಚಾಲನೆ ಮಾಡುವ ಚಾಲಕ ಬ್ಯಾಡ್ಜ್‌ ಹೊಂದಿರಬೇಕು ಎಂಬ ನಿಯಮವಿದೆ.