ಸತ್ನಾ ಜಿಲ್ಲೆಯಲ್ಲಿ ಅಕ್ಟೋಬರ್ 1ರಿಂದಲೇ ಈ ನೂತನ ನಿಯಮ ಜಾರಿಯಾಗಲಿದೆ ಎನ್ನಲಾಗಿದೆ. ವಿದ್ಯಾರ್ಥಿಗಳಲ್ಲಿ ದೇಶಪ್ರೇಮದ ಕುರಿತು ಅರಿವು ಮೂಡಿಸಲು ಈ ಕ್ರಮ ಎಂದು ಶಿಕ್ಷಣ ಸಚಿವ ವಿಜಯ್ ಶಾ ಹೇಳಿದ್ದಾರೆ.

ಭೋಪಾಲ್(ಸೆ.14): ಮಧ್ಯಪ್ರದೇಶದ ಶಾಲಾ ವಿದ್ಯಾರ್ಥಿಗಳು ಇನ್ನು ಮುಂದಿನ ದಿನಗಳಲ್ಲಿ ಶಾಲಾ ಹಾಜರಾತಿ ವೇಳೆ ಯೆಸ್ ಮೇಡಂ ಅಥವಾ ಪ್ರಸೆಂಟ್ ಟೀಚರ್ ಎನ್ನುವಂತಿಲ್ಲ. ಬದಲಾಗಿ ಜೈಹಿಂದ್ ಟೀಚರ್ ಎಂದು ಉತ್ತರಿಸಬೇಕಿದೆ.

ಇದೇ ವರ್ಷದ ಜನವರಿಯಲ್ಲಿ ಎಲ್ಲಾ ಶಾಲೆಗಳಲ್ಲಿ ಧ್ವಜಾರೋಹಣ ಕಡ್ಡಾಯಗೊಳಿಸಿದ್ದ ರೀತಿಯಲ್ಲೇ, ಇದೀಗ ಶಿಕ್ಷಕರು, ವಿದ್ಯಾರ್ಥಿಗಳ ಹಾಜರಾತಿ ಹಾಕುವ ವೇಳೆ ಯೆಸ್ ಎನ್ನುವ ಬದಲಿಗೆ ಜೈ ಹಿಂದ್ ಎಂದು ಹೇಳುವ ಆದೇಶವನ್ನು ನ.1ರಿಂದ ಜಾರಿಗೆ ತರಲು ಮುಂದಾಗಿದೆ.

ಆದರೆ, ಸತ್ನಾ ಜಿಲ್ಲೆಯಲ್ಲಿ ಅಕ್ಟೋಬರ್ 1ರಿಂದಲೇ ಈ ನೂತನ ನಿಯಮ ಜಾರಿಯಾಗಲಿದೆ ಎನ್ನಲಾಗಿದೆ. ವಿದ್ಯಾರ್ಥಿಗಳಲ್ಲಿ ದೇಶಪ್ರೇಮದ ಕುರಿತು ಅರಿವು ಮೂಡಿಸಲು ಈ ಕ್ರಮ ಎಂದು ಶಿಕ್ಷಣ ಸಚಿವ ವಿಜಯ್ ಶಾ ಹೇಳಿದ್ದಾರೆ.

ಆದರೆ, ಇದಕ್ಕೆ ಆಕ್ಷೇಪಿಸಿರುವ ವಿಪಕ್ಷ ಕಾಂಗ್ರೆಸ್ ಮತ್ತು ಶಿಕ್ಷಣ ತಜ್ಞರು, ಶಿಕ್ಷಣದ ಗುಣಮಟ್ಟ ಮತ್ತು ಫಲಿತಾಂಶ ಹೆಚ್ಚಳದ ಬಗ್ಗೆ ಗಮನ ಹರಿಸ ಬಹುದಿತ್ತು ಎಂದು ಹೇಳಿವೆ.