ಈ ಘಟನೆಯಿಂದ ಎಚ್ಚೆತ್ತುಕೊಂಡ ಕಾಲೇಜು ಶಿಕ್ಷಣ ಇಲಾಖೆ 2017-18 ನೇ ಸಾಲಿನ ಶೈಕ್ಷಣಿಕ ವರ್ಷದಿಂದ ನೂತನ ನಿಯಮ ಜಾರಿಗೊಳಿಸಲಿದೆ
ಬೆಂಗಳೂರು(ಮಾ.19): ನಗರದ ಮಹಿಳೆಯರ ಪ್ರಮುಖ ಕಾಲೇಜಾಗಿರುವ ಮಹಾರಾಣಿ ಕಾಲೇಜಿನಲ್ಲಿ ಇನ್ಮುಂದೆ ಪುರುಷರಿಗೆ ಪ್ರವೇಶವಿಲ್ಲ. ಇದೇನಿದು ಇದು ಮಾಮೂಲಿ ವಿಷಯವಲ್ಲವೆ ಎಂದು ನೀವು ಹೇಳಬಹುದು.
ಆದರೆ ಹೊಸ ವಿಷಯವೇನೆಂದರೆ ಇನ್ಮುಂದೆ ಈ ಕಾಲೇಜಿನಲ್ಲಿ ಉಪನ್ಯಾಸಕರು ಕೂಡ ಮಹಿಳೆಯರೆ. ನಿನ್ನೆಯಷ್ಟೆ ಸುವರ್ಣ ನ್ಯೂಸ್ ಉಪನ್ಯಾಸಕನೊಬ್ಬ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ನೀಡಿರುವ ಬಗ್ಗೆ ವರದಿ ಪ್ರಸಾರ ಮಾಡಿತ್ತು. ಈ ಘಟನೆಯಿಂದ ಎಚ್ಚೆತ್ತುಕೊಂಡ ಕಾಲೇಜು ಶಿಕ್ಷಣ ಇಲಾಖೆ 2017-18 ನೇ ಸಾಲಿನ ಶೈಕ್ಷಣಿಕ ವರ್ಷದಿಂದ ನೂತನ ನಿಯಮ ಜಾರಿಗೊಳಿಸಲಿದೆ. ಈ ನಿಯಮದ ಪ್ರಕಾರ ಬೋಧಕವರ್ಗ, ಬೋಧಕೇತರ ವರ್ಗದಲ್ಲಿರುವ ಎಲ್ಲ ಪುರುಷ ಸಿಬ್ಬಂದಿಗೆ ಕೊಕ್ ನೀಡಿ ಮಹಿಳೆಯರನ್ನೇ ನೇಮಿಸಿಕೊಳ್ಳುವ ಮಹತ್ವದ ನಿರ್ಧಾರ ಕೈಗೊಳ್ಳಲಿದೆ.
(ಸಾಂದರ್ಭಿಕ ಚಿತ್ರ)
