ಇಬ್ಬರು ಯೋಧರನ್ನು ಕೊಲ್ಲುವುದರ ಜೊತೆಗೆ ಛಿದ್ರಗೊಳಿಸಿ ಅಮಾನವೀಯವಾಗಿ ವರ್ತಿಸಿದ ಪಾಕ್'ನ ಕ್ರಮಕ್ಕೆ ಭಾರತ ಸರ್ಕಾರ ಶಾಕ್ ನೀಡಲು ಮುಂದಾಗಿದೆ.

ನವದೆಹಲಿ(ಮೇ.06): ಯುದ್ಧದ ನಿಯಮವನ್ನು ಉಲ್ಲಂಘಿಸಿ ಭಾರತದ ಗಡಿಯೊಳಗೆ ಪ್ರವೇಶಿಸಿ ಇಬ್ಬರು ಯೋಧರನ್ನು ಕೊಲ್ಲುವುದರ ಜೊತೆಗೆ ಛಿದ್ರಗೊಳಿಸಿ ಅಮಾನವೀಯವಾಗಿ ವರ್ತಿಸಿದ ಪಾಕ್'ನ ಕ್ರಮಕ್ಕೆ ಭಾರತ ಸರ್ಕಾರ ಶಾಕ್ ನೀಡಲು ಮುಂದಾಗಿದೆ.

ಇಸ್ಲಮಾಬಾದ್'ನಲ್ಲಿರುವ ಭಾರತ ರಾಯಭಾರಿ ಕಚೇರಿಗೆ ಸಮಸ್ಸ್ ಕಳುಹಿಸುರುವ ಕೇಂದ್ರ ಸರ್ಕಾರ ಪಾಕಿಸ್ತಾನಿ ನಾಗರಿಕರಿಗೆ ಭಾರತದಲ್ಲಿ ಚಿಕಿತ್ಸೆ ಪಡೆಯಲು ಇನ್ನು ಮುಂದೆ ವೈದ್ಯಕೀಯ ವೀಸಾಗಳನ್ನು ನೀಡುವುದಿಲ್ಲ ಎಂದು ತಿಳಿಸಿದೆ' ಎಂದು ಪಾಕಿಸ್ತಾನಿ ಮಾಧ್ಯಮಗಳು ವರದಿ ಮಾಡಿವೆ. ಜಿಯೋ ನ್ಯೂಸ್ ವರದಿ ಮಾಡಿರುವಂತೆ, ಪಾಕಿಸ್ತಾನಿ ಪ್ರಜೆಗಳು ಯಕೃತ್ತು ಹಾಗೂ ಹೃದಯ ಸಂಬಂಧಿತ ಕಾಯಿಲೆಗಳ ಚಿಕಿತ್ಸೆಗಾಗಿ ಭಾರತದ ನವದೆಹಲಿ, ಚೆನ್ನೈ ಹಾಗೂ ಇತರ ಭಾರತೀಯ ಪಟ್ಟಣಗಳಲ್ಲಿ ಚಿಕಿತ್ಸೆ ಪಡೆಯಲು ವೈದ್ಯಕೀಯ ವೀಸಾಕ್ಕೆ ಅರ್ಜಿ ಸಲ್ಲಿಸುತ್ತಾರೆ.

ಆದರೆ ಇನ್ನು ಮುಂದೆ ಪಾಕ್ ಪ್ರಜೆಗಳಿಗೆ ಯಾವುದೇ ಕಾರಣಕ್ಕೂ ವೈದ್ಯಕೀಯ ವೀಸಾಗಳನ್ನು ನೀಡುವುದಿಲ್ಲ' ಎಂದು ಅಧಿಕಾರಿಗಳು ತಿಳಿಸಿರುವುದಾಗಿ ಜಿಯೋ ನ್ಯೂಸ್ ವರದಿ ಮಾಡಿದೆ. ಸಮನ್ಸ್'ನಲ್ಲಿ ಈ ವಿಷಯ ತಿಳಿಸಲಾಗಿದ್ದು, ಆದರೆ ಈ ಬಗ್ಗೆ ಅಧಿಕೃತ ಆದೇಶ ಹೊರಬಂದಿಲ್ಲ. ಪಾಕ್'ನ ಕುಕೃತ್ಯಕ್ಕೆ ಪ್ರತಿಯಾಗಿ ಭಾರತ ವೀಸಾ ಪ್ರಕ್ರಿಯೆಯಲ್ಲಿ ಹಲವು ಬದಲಾವಣೆಗಳನ್ನು ತರಲಿದೆ. ಅಲ್ಲದೆ ಕಳೆದ 2 ತಿಂಗಳಲ್ಲಿ ಪಾಕಿಸ್ತಾನದ ಯಾವುದೇ ಪ್ರಜೆಗಳಿಗೂ ವೀಸಾ ನೀಡಲಾಗಿಲ್ಲ' ಎಂದು ಮತ್ತೊಂದು ಪಾಕ್'ನ ಚಾನಲ್ ದುನಿಯಾ ವರದಿ ಮಾಡಿದೆ.

ಭಾರತದ ಈ ಕಠಿಣ ಕ್ರಮದಿಂದ ಆರೋಗ್ಯ ಸಂಬಂಧಿತ ಸಮಸ್ಯೆಗಳಿಗೆ ಭಾರತಕ್ಕೆ ಬರುವ ಹಲವು ಪಾಕಿಸ್ತಾನಿಗಳಿಗೆ ತೊಂದರೆಯಾಗಲಿದೆ. ಪಾಕ್ ಸೇನಾ ನ್ಯಾಯಾಲಯ ಭಾರತದ ನಾಗರಿಕ ಕುಲಭೂಷನ್ ಜಾಧವ್ ಅವರಿಗೆ ಇತ್ತೀಚಿಗಷ್ಟೆ ಗಲ್ಲು ಶಿಕ್ಷೆ ವಿಧಿಸಿದ ನಂತರ ಹಾಗೂ ಇತ್ತೀಚಿಗಷ್ಟೆ ಇಬ್ಬರು ಭಾರತೀಯ ಯೋಧರ ದೇಹವನ್ನು ಛಿದ್ರಗೊಳಿಸಿದ ಮೇಲೆ ಎರಡೂ ದೇಶಗಳ ಸಂಬಂಧ ಸಂಪೂರ್ಣ ಹದಗೆಟ್ಟಿದೆ.