ಮೇಕಪ್ ಇಲ್ಲದೇ ಚಲನ ಚಿತ್ರ ತಾರೆಯರನ್ನು, ಸೆಟ್ಟನ್ನು ಕಲ್ಪಿಸಿಕೊಳ್ಳಲು ಆಗುವುದಿಲ್ಲ. ಇನ್ನಷ್ಟು ಗ್ಲಾಮರ್ ಆಗಿ ಕಾಣಿಸಬೇಕೆಂದರೆ ನಟ-ನಟಿಯರಿಗೆ ಮೇಕಪ್ ಮಾಡಲೇಬೇಕು. ಆದರೆ ಈ ಸೆಟ್ ಗೆ ಮೇಕಪ್ ಮಾಡಿಕೊಂಡು ಬರುವಂತಿಲ್ಲ! ಬಂದರೆ ವಾಪಸ್ ಹೋಗಬೇಕಾಗುತ್ತದೆ.
ನವದೆಹಲಿ (ಏ.01): ಮೇಕಪ್ ಇಲ್ಲದೇ ಚಲನ ಚಿತ್ರ ತಾರೆಯರನ್ನು, ಸೆಟ್ಟನ್ನು ಕಲ್ಪಿಸಿಕೊಳ್ಳಲು ಆಗುವುದಿಲ್ಲ. ಇನ್ನಷ್ಟು ಗ್ಲಾಮರ್ ಆಗಿ ಕಾಣಿಸಬೇಕೆಂದರೆ ನಟ-ನಟಿಯರಿಗೆ ಮೇಕಪ್ ಮಾಡಲೇಬೇಕು. ಆದರೆ ಈ ಸೆಟ್ ಗೆ ಮೇಕಪ್ ಮಾಡಿಕೊಂಡು ಬರುವಂತಿಲ್ಲ! ಬಂದರೆ ವಾಪಸ್ ಹೋಗಬೇಕಾಗುತ್ತದೆ.
ರಾಷ್ಟ್ರೀಯ ಪ್ರಶಸ್ತಿ ವಿಜೇತ ನಿರ್ದೇಶಕ ಶ್ರೀಜಿತ್ ಮುಖರ್ಜಿ ಬಾಲಿವುಡ್ ನಲ್ಲಿ ಬೇಗಂ ಜಾನ್ ಎನ್ನುವ ಚಿತ್ರವನ್ನು ಮಾಡುತ್ತಿದ್ದಾರೆ. ಇದು ಬಾಲಿವುಡ್ ನಲ್ಲಿ ಇವರ ಮೊದಲ ಚಿತ್ರವಾಗಿದೆ. ವಿದ್ಯಾ ಬಾಲನ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಪಾತ್ರಗಳನ್ನು ಸಹಜವಾಗಿ ತೋರಿಸಬೇಕೆಂದು ಶ್ರೀಜಿತ್ ನಿರ್ಧರಿಸಿದ್ದಾರೆ. ಹಾಗಾಗಿ ಎಷ್ಟು ಸಾಧ್ಯವೋ ಅಷ್ಟು ಕನಿಷ್ಟ ಮೇಕಪ್ ಮಾಡಿಕೊಳ್ಳಲು ಚಿತ್ರ ತಂಡಕ್ಕೆ ಸಲಹೆ ನೀಡಲಾಗಿದೆ. ಕೆಲವು ಹುಡುಗಿಯರು ಮೇಕಪ್ ಮಾಡಿಕೊಂಡು ಬಂದು ವಂಚಿಸಲು ಯತ್ನಿಸಿ ಹೊರಹೋಗುತ್ತಾರೆ.
ಶೂಟಿಂಗ್ ಗೂ ಮುನ್ನ ಶ್ರೀಜಿತ್ ಪ್ರತಿಯೊಬ್ಬರ ಮೇಕಪನ್ನು ಪರೀಕ್ಷಿಸುತ್ತಾರೆ. ಒದ್ದೆ ಟಿಸ್ಯೂ ಪೇಪರ್ ನಿಂದ ಎಕ್ಸ್ಟ್ರಾ ಮೇಕಪ್ಪನ್ನು ತೆಗೆಯುತ್ತೇನೆ. ಭಾರೀ ಮೇಕಪ್ ಮಾಡಿಕೊಳ್ಳುವುದು, ಉಗುರುಗಳಿಗೆ ಮೆನಿಕ್ಯೂರ್ ಮಾಡಿಕೊಳ್ಳುವುದನ್ನು ನಾನು ಇಷ್ಟಪಡುವುದಿಲ್ಲ ಎಂದು ಶ್ರೀಜಿತ್ ಹೇಳಿದ್ದಾರೆ.
