ಬೆಂಗಳೂರು(ಫೆ.06)  ಮಹಿಳಾ ಪುರೋಹಿತರು ಬಂದಿದ್ದಕ್ಕೆ ತಂದೆ ಕನ್ಯಾದಾನ ಮಾಡಿಲ್ಲ ಎಂಬ ವಿಚಾರ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿ ಆಗುತ್ತಿದೆ. 

ಹಾಗಾದರೆ ಇದರ ಮೂಲ ಯಾವುದು?  ಕೋಲ್ಕತಾದಲ್ಲಿ ನಡೆದ ಘಟನೆ  ಇದೀಗ ವೈರಲ್ ಆಗುತ್ತಿದೆ.  ಮಹಿಳಾ ಪುರೋಹಿತರು ಬಂದಿದ್ದಕ್ಕೆ ತಂದೆ ಕನ್ಯಾದಾನ ಮಾಡಲು ಒಪ್ಪಿಲ್ಲ.  ಮದುವೆ ಸಂದರ್ಭ ತಂದೆ ಹೆಸರಿಗಿಂತ ಮುಂಚೆ ತಾಯಿ ಹೆಸರು ತೆಗೆದುಕೊಂಡಿದ್ದಕ್ಕೂ ಪರ ವಿರೋಧದ ಅಭಿಪ್ರಾಯ ವ್ಯಕ್ತವಾಗಿದೆ.

ಟ್ವಿಟರ್‌ನ ಹಲವು ಮಂದಿ ಹೇಳಿರುವ ಪ್ರಕಾರ ಮಹಿಳಾ ಪುರೋಹಿತರ ಹೆಸರು ನಂದಿನಿ ಭೋಮಿಕ್. ರಂಗಕರ್ಮಿಯಾಗಿಯೂ ಗುರುತಿಸಿಕೊಂಡಿರುವ ಅವರು ಸಂಸ್ಕೃತ ವಿದ್ವಾಂಸರೂ ಹೌದು.