ಸರ್ಕಾರ ರಚನೆ ಮಾಡಲು ಉತ್ಸುಕರಾಗಿ ಕಾದು ಕುಳಿತಿದ್ದ ಯಡಿಯೂರಪ್ಪ ಈಗ ಚಡಪಡಿಕೆಯಲ್ಲಿದ್ದಾರೆ. ಬಿಜೆಪಿ ಹೈ ಕಮಾಂಡ್ ಯಾವುದೇ ಸೂಚನೆ ನೀಡದ ಹಿನ್ನೆಲೆ ಆತಂಕಗೊಂಡಿದ್ದಾರೆ. 

ಬೆಂಗಳೂರು [ಜು.25]: ಮೈತ್ರಿ ಸರ್ಕಾರ ಪತನಗೊಂಡು 24 ಗಂಟೆ ಕಳೆದರೂ ಬಿಜೆಪಿ ಸರ್ಕಾರ ರಚನೆ ಬಗ್ಗೆ ಪಕ್ಷದ ಹೈಕಮಾಂಡ್‌ ಯಾವುದೇ ಗ್ರೀನ್‌ ಸಿಗ್ನಲ್‌ ನೀಡದ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಬಿ.ಎಸ್‌. ಯಡಿಯೂರಪ್ಪ ಅವರು ಚಡಪಡಿಕೆಯಲ್ಲಿದ್ದಾರೆ.

"

ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡ ಬೆನ್ನಲ್ಲೇ ಹೊಸ ಸರ್ಕಾರ ರಚಿಸುವ ಉಮೇದಿ ಬಿಜೆಪಿಯಲ್ಲಿತ್ತು. ಆದರೆ, ಬಿಜೆಪಿ ಹೈಕಮಾಂಡ್‌ ಸರ್ಕಾರ ರಚನೆ ಬಗ್ಗೆ ಇನ್ನೂ ಯಾವುದೇ ಸಂದೇಶ ನೀಡದಿರುವುದು ಇದಕ್ಕೆ ಕಾರಣ ಎನ್ನಲಾಗಿದೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇತ್ತ ಜಗದೀಶ್ ಶೆಟ್ಟರ್ ನಿಯೋಗ ದಿಲ್ಲಿಗೆ ತೆರಳಿ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದೆ. ಆದರೆ ಈ ಭೇಟಿ ಇನ್ನೂ ಪರಿಪೂರ್ಣವಾದಂತೆ ಕಂಡು ಬರುತ್ತಿಲ್ಲ. ಸರ್ಕಾರ ರಚನೆ ಮಾಡಲು ಈಗಾಗಲೇ ಮುಹೂರ್ತ ಫಿಕ್ಸ್ ಮಾಡಿ ಕಾದು ಕುಳಿತಿರುವ ನಾಯಕರಿಗೆ ಹೈ ಕಮಾಂಡ್ ಬ್ರೇಕ್ ಹಾಕುತ್ತಿದೆ.