ಈ ಷರತ್ತಿನ ಅನ್ವಯ ಉದ್ಯೋಗ ಪಡೆದುಕೊಂಡವರು ತಮ್ಮ ಸೇವಾವಧಿ ಪೂರ್ಣಗೊಳ್ಳುವವರೆಗೂ ಇದನ್ನು ಪಾಲಿಸಬೇಕು. ಅಲ್ಲದೇ, ಟ್ರ್ಯಾಕ್ಟರ್ ನೀಡಿಕೆ, ಗೃಹ ಹಂಚಿಕೆ ಮುಂತಾದ ಸರ್ಕಾರಿ ಯೋಜನೆಗಳಿಗೂ ಯೋಜನೆ ಅನ್ವಯವಾಗಲಿದೆ.

ಗುವಾಹಟಿ(ಏ.09): ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಪಡೆದವರಿಗೆ ಸರ್ಕಾರಿ ಉದ್ಯೋಗ ನಿರಾಕರಿಸುವ ಜನಸಂಖ್ಯಾ ಯೋಜನೆಯ ಕರಡು ನೀತಿಯೊಂದನ್ನು ಅಸ್ಸಾಂ ಸರ್ಕಾರ ಭಾನುವಾರ ಪ್ರಕಟಿಸಿದೆ.

ಕರಡು ನೀತಿಯ ಪ್ರಕಾರ, ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಪಡೆಯುವವರು ಸರ್ಕಾರಿ ಉದ್ಯೋಗಕ್ಕೆ ಅರ್ಹರಾಗಿರುವುದಿಲ್ಲ ಎಂದು ಅಸ್ಸಾಂ ಆರೋಗ್ಯ ಸಚಿವ ಹಿಮಂತ ಬಿಸ್ವಾ ಶರ್ಮಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಷರತ್ತಿನ ಅನ್ವಯ ಉದ್ಯೋಗ ಪಡೆದುಕೊಂಡವರು ತಮ್ಮ ಸೇವಾವಧಿ ಪೂರ್ಣಗೊಳ್ಳುವವರೆಗೂ ಇದನ್ನು ಪಾಲಿಸಬೇಕು. ಅಲ್ಲದೇ, ಟ್ರ್ಯಾಕ್ಟರ್ ನೀಡಿಕೆ, ಗೃಹ ಹಂಚಿಕೆ ಮುಂತಾದ ಸರ್ಕಾರಿ ಯೋಜನೆಗಳಿಗೂ ಯೋಜನೆ ಅನ್ವಯವಾಗಲಿದೆ. ಪಂಚಾಯತ್, ಮುನಿಸಿಪಾಲಿಟಿ ಚುನಾವಣೆ ಸೇರಿದಂತೆ ರಾಜ್ಯ ಚುನಾವಣಾ ಆಯೋಗದ ಅಡಿಯಲ್ಲಿ ನೆಡೆಯುವ ಚುನಾವಣಾ ಅಭ್ಯರ್ಥಿಗಳೂ ಈ ನೀತಿ ಪಾಲಿಸಬೇಕು ಎಂದು ಅವರು ಹೇಳಿದರು.