ಯಾವ ಒಳ್ಳೆ  ಹಿಂದುವೂ ಕೂಡ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವುದನ್ನು ಬಯಸುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ ಶಶಿ ತರೂರ್ ಹೇಳಿದ್ದಾರೆ. 

ಚೆನ್ನೈ : ರಾಮ ಮಂದಿರ ನಿರ್ಮಾಣದ ಬಗ್ಗೆ ಕಾಂಗ್ರೆಸ್ ಸಂಸದ ಶಶಿ ತರೂರ್ ಇದೀಗ ವಿವಾದಿತ ಹೇಳಿಕೆ ನೀಡಿದ್ದಾರೆ. ಬಾಬ್ರಿ ಮಸೀದಿ ಕೆಡವಿದ ವಿಚಾರವನ್ನು ಇರಿಸಿಕೊಂಡು ಮಾತನಾಡಿದ ಅವರು ಯಾವ ಓರ್ವ ಉತ್ತಮ ಹಿಂದೂ ವ್ಯಕ್ತಿಯೂ ಕೂಡ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವುದನ್ನು ಬಯಸುವುದಿಲ್ಲ ಎಂದು ಹೇಳಿದ್ದಾರೆ.

ಬೇರೆಯವರ ಪವಿತ್ರ ಭೂಮಿಯನ್ನು ನಾಶ ಮಾಡಿ ಅಂತಹ ಸ್ಥಳದಲ್ಲಿ ತಮ್ಮ ಮಂದಿರ ನಿರ್ಮಾಣ ಮಾಡುವುದನ್ನು ಬಯಸುವುದಿಲ್ಲ ಎಂದಿದ್ದಾರೆ. 

ಚೆನ್ನೈನಲ್ಲಿ ನಡೆದ ಸಾಹಿತ್ಯ ಸಮ್ಮೇಳನ ಒಂದನ್ನು ಉದ್ಘಾಟಿಸಿ ಮಾತನಾಡಿದ ಅವರು ಬಿಜೆಪಿ ಧರ್ಮದ ಹೆಸರಿನಲ್ಲಿ ಭಿನ್ನತೆ ಮೂಡಿಸುತ್ತಿದೆ. 2019 ಚುನಾವಣೆ ಹೊಸ್ತಿಲಿನಲ್ಲಿಯೇ ಈ ರೀತಿ ನಡೆದುಕೊಳ್ಳುತ್ತಿದೆ ಎಂದು ಹೇಳಿದ್ದಾರೆ. ಇನ್ನು ಇದೇ ವೇಳೆ ತುರ್ತು ಪರಿಸ್ಥಿತಿ ಬಗ್ಗೆಯೂ ಕೂಡ ಪ್ರಸ್ತಾಪಿಸಿದ್ದಾರೆ. 

ತರೂರ್ ಹೇಳಿಕೆಗೆ ಪ್ರತ್ಯುತ್ತರ ನೀಡಿರುವ ಬಿಜೆಪಿ ವಕ್ತಾರ ಶನವಾಜ್ ಹುಸೇನ್, 'ಈಗಾಗಲೇ ಟೆಂಟ್‌ನಲ್ಲಿ ಪೂಜೆ ನಡೆಯುತ್ತಿರುವ ಸ್ಥಳ ಬದಲಾಯಿಸಬೇಕೆಂದು ತರೂರ್ ಆಗ್ರಹಿಸುತ್ತಿದ್ದಾರೆಯೇ? ಇದುವರೆಗೂ ಯಾರೂ ಇಂಥ ಆಗ್ರಹವನ್ನು ಇಟ್ಟಿರಲಿಲ್ಲ.' ಎಂದಿದ್ದಾರೆ.

Scroll to load tweet…