ಸುಸ್ತಿ ಕಂಪನಿಗಳ ಪ್ರವರ್ತಕರ ವಿದೇಶ ಪ್ರವಾಸಕ್ಕೆ ಕತ್ತರಿ?

No Foreign Trip For Business Man Who Not Paying Loan
Highlights

ಕಂಪನಿಗಳು ಸುಸ್ತಿದಾರರಾದರೂ, ಅವುಗಳ ಪ್ರವರ್ತಕರು ಯಾವುದೇ ಚಿಂತೆ ಇಲ್ಲದೇ ಆರಾಮಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಇಂಥ ಸುಸ್ತಿದಾರ ಕಂಪನಿಗಳ ಪ್ರವರ್ತಕರಿಗೆ ಮೂಗುಧಾರ ಹಾಕಲು ನಿರ್ಧರಿಸಿದೆ.

ನವದೆಹಲಿ: ಕಂಪನಿಗಳು ಸುಸ್ತಿದಾರರಾದರೂ, ಅವುಗಳ ಪ್ರವರ್ತಕರು ಯಾವುದೇ ಚಿಂತೆ ಇಲ್ಲದೇ ಆರಾಮಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಇಂಥ ಸುಸ್ತಿದಾರ ಕಂಪನಿಗಳ ಪ್ರವರ್ತಕರಿಗೆ ಮೂಗುಧಾರ ಹಾಕಲು ನಿರ್ಧರಿಸಿದೆ.

ಇಂಥ ಯಾವುದೇ ಸುಸ್ತಿದಾರ ಕಂಪನಿಗಳ ಪ್ರವರ್ತಕರ ವಿದೇಶ ಭೇಟಿಗೆ ಕಡಿವಾಣ ಹಾಕುವ ಮತ್ತು ಅವರ ವಿದೇಶಿ ವಹಿವಾಟಿನಲ್ಲಿ ದಿಢೀರನೆ ಆಗಿರುವ ಏರಿಕೆಯನ್ನು ಪರಿಶೀಲಿಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಈ ಕ್ರಮಗಳನ್ನು ಜಾರಿಗೊಳಿಸಲು ಆರ್‌ಬಿಐ ಮತ್ತು ಹಣಕಾಸು ಗುಪ್ತಚರ ಸಂಸ್ಥೆಯ ನೆರವನ್ನು ಸರ್ಕಾರ ಪಡೆಯಯಲಿದೆ ಎನ್ನಲಾಗಿದೆ.

ಹಲವು ಪ್ರಕರಣಗಳಲ್ಲಿ, ಸುಸ್ತಿದಾರ ಕಂಪನಿಗಳ ಪ್ರವರ್ತರು ವಿದೇಶಕ್ಕೆ ಪರಾರಿಯಾಗುವ ಮುನ್ನು ಅವರು ವಿದೇಶಗಳಲ್ಲಿ ಹೊಂದಿರುವ ಸಹಸಂಸ್ಥೆಗಳ ಹಣಕಾಸು ವ್ಯವಹಾರದಲ್ಲಿ ದಿಢೀರನೇ ಏರಿಕೆಯಾಗಿರುವುದು ಕಂಡುಬಂದಿದೆ. ಹೀಗಾಗಿ ಈ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಮೂಲಗಳು ತಿಳಿಸಿವೆ.

loader