ಬಿಎಸ್‌ವೈ ಸಿಎಂ ಆಗುವವರೆಗೆ ಚಪ್ಪಲಿ ಹಾಕಲ್ಲ: ಯುವಕ ಶಪಥ

First Published 5, Apr 2018, 7:39 AM IST
No Footwear Youth Take Challenge
Highlights

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರು ಮತ್ತೊಮ್ಮೆ ಮುಖ್ಯಮಂತ್ರಿ ಆಗುವವರೆಗೂ ಪಾದರಕ್ಷೆ ಧರಿಸದೇ ಬರಿಗಾಲಿನಲ್ಲೇ ನಡೆಯುವುದಾಗಿ ಮಂಡ್ಯದ ಅಭಿಮಾನಿಯೊಬ್ಬ ಸಂಕಲ್ಪ ಮಾಡಿದ್ದಾನೆ.

ಮಂಡ್ಯ : ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರು ಮತ್ತೊಮ್ಮೆ ಮುಖ್ಯಮಂತ್ರಿ ಆಗುವವರೆಗೂ ಪಾದರಕ್ಷೆ ಧರಿಸದೇ ಬರಿಗಾಲಿನಲ್ಲೇ ನಡೆಯುವುದಾಗಿ ಮಂಡ್ಯದ ಅಭಿಮಾನಿಯೊಬ್ಬ ಸಂಕಲ್ಪ ಮಾಡಿದ್ದಾನೆ.

ಬಿಜೆಪಿ ಕಾರ್ಯಕರ್ತ ಶಿವಕುಮಾರ್‌ ಆರಾಧ್ಯ ಎಂಬಾತ ನಗರದ ಕಾಳಿಕಾಂಬ ದೇವಸ್ಥಾನದಲ್ಲಿ ದೇವರ ಎದುರೇ ಈ ಶಪಥ ಮಾಡಿದ್ದಾನೆ. ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ನೂರಾರು ಕೋಟಿ ಅನುದಾನ ನೀಡಿ, ಹೈನುಗಾರರಿಗೆ ಪ್ರೋತ್ಸಾಹ ಧನ ನೀಡಿ ಆರ್ಥಿಕವಾಗಿ ಸಬಲರಾಗಲು ಯಡಿಯೂರಪ್ಪ ನೆರವಾಗಿದ್ದಾರೆ.

ಇಂತಹ ರೈತನಾಯಕ ಯಡಿಯೂರಪ್ಪ ಅವರು ಮತ್ತೊಮ್ಮೆ ರಾಜ್ಯದಲ್ಲಿ ಮುಖ್ಯಮಂತ್ರಿಯಾದರೆ ಮಾತ್ರ ರಾಜ್ಯದ ಪ್ರಗತಿ ಸಾಧ್ಯ. ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಬಹುಮತ ಸಾಧಿಸಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಬೇಕು ಎಂಬ ಸಂಕಲ್ಪ ಮಾಡಿ ದೇವರಿಗೆ ಹರಕೆ ಹೊತ್ತಿದ್ದೇನೆ ಎಂದು ಆರಾಧ್ಯ ತಿಳಿಸಿದರು.

loader