ಲಕ್ನೋ [ಜು.04] : ಕನ್ವರ್ ಯಾತ್ರೆ ವೇಳೆ  ಡಿಜೆಗಳಿಗೆ ನಿಷೇಧವಿರುವುದಿಲ್ಲ. ಅದರೆ ಡಿಜೆಗಳಲ್ಲಿ ಯಾವುದೇ ಚಿತ್ರಗೀತೆಗಳಿಗೆ ಅವಕಾಶವಿಲ್ಲ. ಕೇವಲ ಭಜನೆ ಹಾಡುಗಳನ್ನು ಮಾತ್ರವೇ ಹಾಕಬಹುದು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೂಚಿಸಿದ್ದಾರೆ. 

ಬುಧವಾರ ರಾಜ್ಯ ಆಡಳಿತಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಿಎಂ, ಸಾವಿರಾರು ಜನರು ಸೇರುವ ಕನ್ವರ್ ಯಾತ್ರೆಗೆ ಸೂಕ್ತ ಭದ್ರತೆ ಕಲ್ಪಿಸುವಂತೆ ಆದೇಶಿಸಿದ್ದಾರೆ. 

ಇನ್ನು ಯಾತ್ರೆ ವೇಳೆ ಡಿಜೆ ಬ್ಯಾನ್ ಮಾಡುವುದಿಲ್ಲ. ಆದರೆ ಚಿತ್ರಗೀತೆ ಹಕುವಂತಿಲ್ಲ, ಭಜನೆ ಹಾಡುಗಳನ್ನು ಏರುಧ್ವನಿ ನೀಡದೇ ಹಾಬದುದೆಂದು ತಿಳಿಸಿದರು.

ಕನ್ವರ್ ಯಾತ್ರೆ ವೇಳೆ ಸಾವಿರಾರು ಭಕ್ತರು ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ರಾಜ್ಯದ ಶಿವ ದೇವಾಲಯಗಳಲ್ಲಿ ಅಗತ್ಯ ಸೌಕರ್ಯಗಳಾದ, ವಿದ್ಯುತ್, ಕುಡಿಯುವ ನೀರು, ಮೂಲಕ ಸೌಲಭ್ಯಗಳನ್ನು ಒದಗಿಸಲು ನಿರ್ದೇಶನ ನೀಡಿದ್ದಾರೆ. 

ಸಾವಿರಾರು ಕಿ.ಮೀ ದೂರದ ವರೆಗೆ ಯಾತ್ರೆ ಸಾಗಲಿದ್ದು, ಉತ್ತರಾಖಂಡ್, ಹರಿದ್ವಾರ, ಗಂಗೋತ್ರಿ, ಸೇರಿ ಬಿಹಾರದ ಗಂಗಾ ನದಿವರೆಗೂ ಸಂಚರಿಸುತ್ತದೆ.