2000 ರು.ವರಗೆ ಹಣ ತೆಗೆಯಲು ಶುಲ್ಕ ಇಲ್ಲ: ಎಸ್‌ಬಿಐ

First Published 20, Apr 2018, 1:02 PM IST
No debit card swipe fee for payments up to Rs 2000
Highlights

ಎಟಿಎಂಗಳಲ್ಲಿ ಹಣದ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಸಣ್ಣ ಪಟ್ಟಣಗಳಲ್ಲಿ ಇರುವ ಜನರು ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ತನ್ನ ಪಿಒಎಸ್‌ (ಪಾಯಿಂಟ್‌ ಆಫ್‌ ಸೇಲ್‌) ಯಂತ್ರಗಳ ಮೂಲಕ ಉಚಿತವಾಗಿ 2000 ರು.ವರೆಗೆ ಹಣವನ್ನು ವಿತ್‌ಡ್ರಾ ಡಬಹುದಾಗಿದೆ ಎಂದು ಎಸ್‌ಬಿಐ ಗುರುವಾರ ತಿಳಿಸಿದೆ.

ನವದೆಹಲಿ: ಎಟಿಎಂಗಳಲ್ಲಿ ಹಣದ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಸಣ್ಣ ಪಟ್ಟಣಗಳಲ್ಲಿ ಇರುವ ಜನರು ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ತನ್ನ ಪಿಒಎಸ್‌ (ಪಾಯಿಂಟ್‌ ಆಫ್‌ ಸೇಲ್‌) ಯಂತ್ರಗಳ ಮೂಲಕ ಉಚಿತವಾಗಿ 2000 ರು.ವರೆಗೆ ಹಣವನ್ನು ವಿತ್‌ಡ್ರಾ ಮಾಡಬಹುದಾಗಿದೆ ಎಂದು ಎಸ್‌ಬಿಐ ಗುರುವಾರ ತಿಳಿಸಿದೆ.

ಆರ್‌ಬಿಐ ನಿರ್ದೇಶನದ ಪ್ರಕಾರ ಒಂದು ಮತ್ತು 2ನೇ ಸ್ಥರದ ನಗರಗಳಲ್ಲಿರುವ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಪಿಒಎಸ್‌ ಯಂತ್ರದ ಮೂಲಕ ಹಣ ತೆಗೆಯಲು ಪ್ರತಿ ಕಾರ್ಡಿಗೆ 1000 ರು.ಮಿತಿ ವಿಧಿಸಲಾಗಿದೆ. ಸಣ್ಣಪಟ್ಟಣಗಳಲ್ಲಿ ಪ್ರತಿದಿನ 2000 ರು. ವಿತ್‌ಡ್ರಾ ಮಾಡಲು ಅವಕಾಶವಿದೆ. ಎಸ್‌ಬಿಐ ಒಟ್ಟು 6.08 ಲಕ್ಷ ಪಿಒಎಸ್‌ ಯಂತ್ರಗಳನ್ನು ಹೊಂದಿದ್ದು, ಆ ಪೈಕಿ 4.78 ಯಂತ್ರಗಳ ಮೂಲಕ ಯಾವದೇ ಶುಲ್ಕವಿಲ್ಲದೇ 2000 ರು. ವರಗೆ ಹಣ ತೆಗೆಯಬಹುದಾಗಿದೆ ಎಂದು ಎಸ್‌ಬಿಐ ಕಾರ್ಯನಿರ್ವಾಹಕ ಅಧಿಕಾರಿ ನೀರಜ್‌ ವ್ಯಾಸ್‌ ತಿಳಿಸಿದ್ದಾರೆ.

loader