ಬೆಂಗಳೂರಿನಲ್ಲಿ 60 ಕೋಟಿ ರುಪಾಯಿ ಸಾಲ ಮರುಪಾವತಿಯಾಗಿಲ್ಲ. ಹೈದರಾಬಾದ್‌ ಹಾಗೂ ಚೆನ್ನೈನಲ್ಲಿ ಮರುಪಾವತಿಯಾಗದ ವಾಹನ ಸಾಲದ ಪ್ರಮಾಣದ ಶೇ.7ರಷ್ಟಿದ್ದು, ಅಲ್ಲಿನ ಚಾಲಕರಿಗೆ ಸಾಲ ನೀಡಲಾಗುತ್ತದೆ ಎಂದು ಎಸ್‌ಬಿಐನ ಸಣ್ಣ ಮತ್ತು ಮಧ್ಯಮ ಉದ್ದಿಮೆ ವಿಭಾಗದ ಪ್ರಧಾನ ವ್ಯವಸ್ಥಾಕ ಗೋಪಾಲ ಕೃಷ್ಣನ್‌ ಕನ್ಸಲ್‌ ತಿಳಿಸಿದ್ದಾರೆ.

ಮುಂಬೈ(ಏ.26): 60 ಕೋಟಿ ರು. ಸಾಲ ಮರುಪಾವತಿಯಾಗದಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಓಲಾ ಕ್ಯಾಬ್‌ ಚಾಲಕರಿಗೆ ಹೊಸದಾಗಿ ಸಾಲ ನೀಡದಿರಲು ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ನಿರ್ಧರಿಸಿದೆ. ಐದನೇ ಒಂದರಷ್ಟುಸಾಲ ಮರುಪಾವತಿಯಾಗುತ್ತಿಲ್ಲ. ಹೀಗಾಗಿ ಓಲಾ ಕಾರು ಚಾಲಕರಿಗೆ ವಾಹನ ಸಾಲ ವಿತರಣೆಯನ್ನು ಎಸ್‌ಬಿಐ ನಿಲ್ಲಿಸಿದೆ ಎಂದು ವಾಣಿಜ್ಯ ದೈನಿಕವೊಂದು ವರದಿ ಮಾಡಿದೆ.

ಬೆಂಗಳೂರಿನಲ್ಲಿ 60 ಕೋಟಿ ರುಪಾಯಿ ಸಾಲ ಮರುಪಾವತಿಯಾಗಿಲ್ಲ. ಹೈದರಾಬಾದ್‌ ಹಾಗೂ ಚೆನ್ನೈನಲ್ಲಿ ಮರುಪಾವತಿಯಾಗದ ವಾಹನ ಸಾಲದ ಪ್ರಮಾಣದ ಶೇ.7ರಷ್ಟಿದ್ದು, ಅಲ್ಲಿನ ಚಾಲಕರಿಗೆ ಸಾಲ ನೀಡಲಾಗುತ್ತದೆ ಎಂದು ಎಸ್‌ಬಿಐನ ಸಣ್ಣ ಮತ್ತು ಮಧ್ಯಮ ಉದ್ದಿಮೆ ವಿಭಾಗದ ಪ್ರಧಾನ ವ್ಯವಸ್ಥಾಕ ಗೋಪಾಲ ಕೃಷ್ಣನ್‌ ಕನ್ಸಲ್‌ ತಿಳಿಸಿದ್ದಾರೆ. ಐಸಿಐಸಿಐ ಬ್ಯಾಂಕ್‌, ಮಹೀಂದ್ರಾ ಫೈನಾನ್ಸ್‌, ಟಾಟಾ ಮೋಟ​ರ್‍ಸ್ ಫೈನಾನ್ಸ್‌ ಕೂಡ ಓಲಾ ಚಾಲಕರಿಗೆ ಸಾಲ ನೀಡುತ್ತವೆಯಾದರೂ, ಅವು ಪ್ರತಿಕ್ರಿಯೆ ನೀಡಿಲ್ಲ ಎಂದು ವರದಿ ಹೇಳಿದೆ.