ವಿಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಅನುಕೂಲವನ್ನು ಒದಗಿಸಿದೆ. ಇದು ಮುಂದಿನ ಲೋಕಸಭಾ ಚುನಾವಣೆಗೆ ದಿಕ್ಸೂಚಿಯೊಂದನ್ನು ಒದಗಿಸಿದಂತಾಗಿದೆ. 

ನವದೆಹಲಿ :  ನರೇಂದ್ರ ಮೋದಿ ಸರ್ಕಾರದ ವಿರುದ್ಧ ಯುಪಿಎ ಮಿತ್ರಕೂಟಗಳು ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದು, ಇದು 15 ವರ್ಷಗಳ ಬಳಿಕ ನಡೆದ ಮೊದಲ ಅವಿಶ್ವಾಸ ನಿರ್ಣಯ ಇದಾಗಿತ್ತು. 

ಸಂಸತ್ತಿನಲ್ಲಿ ಮೋದಿ ಸರ್ಕಾರದ ಮೊದಲ ಅಗ್ನಿ ಪರೀಕ್ಷೆ ಕೂಡ ಆಗಿತ್ತು. ಆದರೆ ಸಂಖ್ಯಾಬಲವನ್ನು ಗಮನಿಸಿದಾಗ ಅವಿಶ್ವಾಸ ನಿರ್ಣಯದ ವಿರುದ್ಧ ಎನ್‌ಡಿಎ ನೇತೃತ್ವದ ಸರ್ಕಾರ ಗೆದ್ದಿದ್ದರಲ್ಲಿ ಅಚ್ಚರಿಯೇನಿಲ್ಲ. ಇದರಿಂದ ಬಿಜೆಪಿ ಒಂದೇ ಏಟಿನಲ್ಲಿ ಎರಡು ಹಕ್ಕಿ ಹೊಡೆದಂತಾಗಿದೆ.

ಮುಂದಿನ ಲೋಕಸಭಾ ಚುನಾವಣೆಗೆ ಇದೊಂದು ದಿಕ್ಸೂಚಿಯಾಗಿರಲಿದ್ದು, ಯಾರು ತಮ್ಮ ಪರ ಎಂಬುದನ್ನು ಬಿಜೆಪಿ ಸುಲಭವಾಗಿ ನಿರ್ಣಯಿಸಬಹುದು. ಅಲ್ಲದೆ ಇದರಿಂದ ಮಹಾಘಟಬಂಧನದ ಭವಿಷ್ಯ ಕೂಡ ನಿರ್ಧಾರವಾಗಲಿದೆ.