Asianet Suvarna News Asianet Suvarna News

ಅಧಿಕಾರ ಇರುತ್ತೆ, ಹೋಗತ್ತೆ, I don't care: ಸಿದ್ದು ಟ್ವೀಟ್​ನ ಮರ್ಮವೇನು?

ಟಿಪ್ಪು ಜಯಂತಿಗೆ ಮೈತ್ರಿ ಸರ್ಕಾರ ನಾಯಕರು ಗೈರು ಹಾಕರಾಗಿದ್ದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಟ್ವೀಟ್​ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

No compromise on secularism says Siddaramaiah on tweet
Author
Bengaluru, First Published Nov 11, 2018, 2:23 PM IST

ಬೆಂಗಳೂರು, (ನ.11): ಬಿಜೆಪಿ ವಿರೋಧದ ನಡುವೆಯೂ ವಿವಾದಿತ ಟಿಪ್ಪು ಜಯಂತಿ ಆಚರಣೆಯನ್ನು ಮೈತ್ರಿ ಸರ್ಕಾರ ನಿನ್ನೆ (ಶನಿವಾರ] ಆಚರಿಸಿದೆ. ಆದರೆ, ಈ ಸರ್ಕಾರಿ ಕಾರ್ಯಕ್ರಮಕ್ಕೆ ಸ್ವತಃ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಗೈರಾಗಿದ್ದು, ಕೆಲವರ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನು ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಟ್ವೀಟ್​ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟಿಪ್ಪು ಜಯಂತಿಯನ್ನು ಸಿದ್ದರಾಮಯ್ಯ ಸರ್ಕಾರದಲ್ಲಿ ಕಳೆದ ಮೂರು ವರ್ಷಗಳಿಂದ ಆಚರಿಸಿಕೊಂಡು ಬಂದಿದ್ದಾರೆ.  

ಈಶ್ವರಪ್ಪ ಒಬ್ಬ ಪೆದ್ದ, ಅವನ ತಲೆಯಲ್ಲಿ ಮೆದುಳಿಲ್ಲ: ಸಿದ್ದರಾಮಯ್ಯ

ಆದರೆ, ಈ ಬಾರಿ ಕಾರ್ಯಕ್ರಮದಲ್ಲಿ ಸ್ವಪಕ್ಷೀಯ ನಾಯಕರು ಹಾಗೂ ವಿಧಾನಸೌಧದಲ್ಲಿ ಆಡಳಿತದ ಪ್ರಮುಖರೇ ಗೈರಾಗುವ ಮೂಲಕ ಪರೋಕ್ಷವಾಗಿ ಈ ಕಾರ್ಯಕ್ರಮದ ಆಚರಣೆ ಬಗ್ಗೆ ಅಸಮ್ಮತಿ ಸೂಚಿಸಿದ್ದಾರೆ.

ಮತ್ತೊಂದೆಡೆ ಟಿಪ್ಪು ಜಯಂತಿ ಆಚರಿಸಿದರೆ ಅಧಿಕಾರ ಹೋಗುತ್ತೆ ಎನ್ನುವ ದೃಷ್ಟಿಯಿಂದ ಸಿಎಂ ಟಿಪ್ಪು ಕಾರ್ಯಕ್ರಮದಿಂದ ದೂರ ಉಳಿದಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ. ಇದಿಗ ಇದಕ್ಕೆ ಸಿದ್ದರಾಮಯ್ಯ ಅವರು ಟ್ವೀಟ್ ಮೂಲಕ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.

ಸಾರ್ವಜನಿಕ ಹಿತದೃಷ್ಟಿಯಿಂದ ಕೆಲವೊಮ್ಮೆ ರಾಜಿಮಾಡಿಕೊಳ್ಳಬೇಕಾಗುತ್ತದೆ, ನಾನೂ ಮಾಡಿರಬಹುದು. ಆದರೆ ಜಾತ್ಯತೀತತೆಯಂತಹ ಮೂಲಭೂತದ ಸಿದ್ಧಾಂತದ ವಿಷಯದಲ್ಲಿ ನಾನು ರಾಜಿಮಾಡಿಕೊಳ್ಳಲಾರೆ. ಅಧಿಕಾರ ಇರುತ್ತೆ, ಹೋಗುತ್ತೆ. I don't care ಎಂದು ಮೈತ್ರಿ ಸರ್ಕಾರದ ಮುಖಂಡರಿಗೆ ಪರೋಕ್ಷವಾಗಿ ತಿವಿದಿದ್ದಾರೆ.
 

Follow Us:
Download App:
  • android
  • ios