Asianet Suvarna News Asianet Suvarna News

ರಾಜ್ಯದ ಯಾವ ನಗರವೂ ವಾಯುಮಾಲಿನ್ಯ ಮುಕ್ತವಲ್ಲ

ರಾಜಧಾನಿ ಸೇರಿದಂತೆ ತುಮಕೂರು, ಬೀದರ್, ದಾವಣಗೆರೆ ಹಾಗೂ ರಾಯಚೂರು- ಕರ್ನಾಟಕದ ಅತಿ ಮಲಿನ ನಗರಗಳು ಎಂದು ಪರಿಸರ ಸ್ವಯಂಸೇವಾ ಸಂಸ್ಥೆಯಾದ ‘ಗ್ರೀನ್ ಪೀಸ್’ ಸೋಮವಾರ ಬಿಡುಗಡೆ ಮಾಡಿದ ವರದಿಯಲ್ಲಿ ಹೇಳಿದೆ. ರಾಜ್ಯದ 10 ಅತಿ ಹೆಚ್ಚು ವಾಯುಮಾಲಿನ್ಯಪೀಡಿತ ನಗರಗಳಲ್ಲಿ ಇವು ಮೊದಲ 5 ಸ್ಥಾನ ಪಡೆದಿವೆ.

No City is Free From Air Pollution Says Survey

ಬೆಂಗಳೂರು (ಜ.31): ರಾಜಧಾನಿ ಸೇರಿದಂತೆ ತುಮಕೂರು, ಬೀದರ್, ದಾವಣಗೆರೆ ಹಾಗೂ ರಾಯಚೂರು- ಕರ್ನಾಟಕದ ಅತಿ ಮಲಿನ ನಗರಗಳು ಎಂದು ಪರಿಸರ ಸ್ವಯಂಸೇವಾ ಸಂಸ್ಥೆಯಾದ ‘ಗ್ರೀನ್ ಪೀಸ್’ ಸೋಮವಾರ ಬಿಡುಗಡೆ ಮಾಡಿದ ವರದಿಯಲ್ಲಿ ಹೇಳಿದೆ. ರಾಜ್ಯದ 10 ಅತಿ ಹೆಚ್ಚು ವಾಯುಮಾಲಿನ್ಯಪೀಡಿತ ನಗರಗಳಲ್ಲಿ ಇವು ಮೊದಲ 5 ಸ್ಥಾನ ಪಡೆದಿವೆ.

ಇನ್ನು ಕರ್ನಾಟಕದ ಇತರ ಹೆಚ್ಚು ಮಲಿನ ನಗರಿಗಳೆಂದರೆ ಹುಬ್ಬಳ್ಳಿ, ಧಾರವಾಡ, ಕೋಲಾರ, ಕಲಬುರಗಿ ಹಾಗೂ ಬೆಳಗಾವಿ. ಈ ನಗರಗಳಲ್ಲಿ ಅತಿ ಹೆಚ್ಚು ಧೂಳಿನ ಪ್ರಮಾಣವಿದ್ದು, ಇದು ಶ್ವಾಸಕೋಶಕ್ಕೆ ಹೋಗಿ ಗಂಭೀರ ಆರೋಗ್ಯ ಪರಿಣಾಮ ಬೀರುತ್ತದೆ ಎಂದು ವರದಿ ಎಚ್ಚರಿಸಿದೆ. ಇದೇ ವೇಳೆ ಕರ್ನಾಟಕದ 18 ಪ್ರಮುಖ ನಗರಗಳಲ್ಲಿ ಯಾವ ನಗರದ ಮಾಲಿನ್ಯ ಪ್ರಮಾಣವೂ ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿರುವ ಸುರಕ್ಷತಾ ಮಿತಿ (ಪ್ರತಿ ಕ್ಯೂಬಿಕ್ ಮೀಟರ್‌ಗೆ 20 ಮೈಕ್ರೋಗ್ರಾಂ) ಒಳಗೆ ಇಲ್ಲ. ಇನ್ನು 10 ನಗರಗಳಂತೂ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (60 ಮೈಕ್ರೋಗ್ರಾಂ/ ಪ್ರತಿ ಕ್ಯೂಬಿಕ್ ಮೀಟರ್‌ಗೆ) ನಿಗದಿಪಡಿಸಿದ ಮಾನದಂಡಕ್ಕಿಂತ ಬಹುದೂರ ಸಾಗಿವೆ ಎಂದು ಕಳವಳ ವ್ಯಕ್ತಪಡಿಸಲಾಗಿದೆ. ಆದರೆ ಉತ್ತರ ಭಾರತಕ್ಕಿಂತ ವಾಯುಮಾಲಿನ್ಯದಲ್ಲಿ ದಕ್ಷಿಣ ಭಾರತ ಉತ್ತಮ ಎಂಬ ಸಮಾಧಾನದ ಅಂಶ ಕೂಡ ವರದಿಯಲ್ಲಿದೆ.

 

Follow Us:
Download App:
  • android
  • ios