ಚಾಚಾ ನೆಹರೂ ಮಕ್ಕಳ ಪ್ರಿಯರಲ್ಲ ಲೂಟಿಕೋರ ಪ್ರಧಾನ ಮಂತ್ರಿ!

First Published 9, Mar 2018, 10:28 AM IST
No Childrens Day In This School
Highlights

ಚಾಚಾ ನೆಹರೂ ಅವರು ದೇಶದ ಮೊದಲ ಪ್ರಧಾನಿ. ಅದಕ್ಕೂ ಹೆಚ್ಚಾಗಿ ಮಕ್ಕಳು ಎಂದರೆ ಅವರಿಗೆ ಭಾರೀ ಅಚ್ಚುಮೆಚ್ಚು. ಇದೇ ಕಾರಣಕ್ಕಾಗಿ ಅವರ ಜನ್ಮ ದಿನಾಚರಣೆಯನ್ನು ಪ್ರತಿ ವರ್ಷದ ನ.14ರಂದು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಆದರೆ, ಜಾರ್ಖಂಡ್‌ ಪ್ರಾಥಮಿಕ ಮಕ್ಕಳಿಗೆ ಚಾಚಾ ನೆಹರೂ ಬಗ್ಗೆ ವಿವರಣೆ ನೀಡಿ ಎಂದರೆ, ಅವರು ಖಂಡಿತವಾಗಿಯೂ ಚಾಚಾ ನೆಹರೂ ಖದೀಮ. ಅವರೊಬ್ಬ ಲೂಟಿಕೋರ ಎಂದು ಹೇಳುತ್ತಾರೆ.

ರಾಂಚಿ: ಚಾಚಾ ನೆಹರೂ ಅವರು ದೇಶದ ಮೊದಲ ಪ್ರಧಾನಿ. ಅದಕ್ಕೂ ಹೆಚ್ಚಾಗಿ ಮಕ್ಕಳು ಎಂದರೆ ಅವರಿಗೆ ಭಾರೀ ಅಚ್ಚುಮೆಚ್ಚು. ಇದೇ ಕಾರಣಕ್ಕಾಗಿ ಅವರ ಜನ್ಮ ದಿನಾಚರಣೆಯನ್ನು ಪ್ರತಿ ವರ್ಷದ ನ.14ರಂದು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಆದರೆ, ಜಾರ್ಖಂಡ್‌ ಪ್ರಾಥಮಿಕ ಮಕ್ಕಳಿಗೆ ಚಾಚಾ ನೆಹರೂ ಬಗ್ಗೆ ವಿವರಣೆ ನೀಡಿ ಎಂದರೆ, ಅವರು ಖಂಡಿತವಾಗಿಯೂ ಚಾಚಾ ನೆಹರೂ ಖದೀಮ. ಅವರೊಬ್ಬ ಲೂಟಿಕೋರ ಎಂದು ಹೇಳುತ್ತಾರೆ.

ಹೌದು, ಇಲ್ಲಿನ ಕುಟಿ ಎಂಬ ಗ್ರಾಮದ ಶಾಲೆಯೊಂದರಲ್ಲಿ ಅಧ್ಯಯನ ಮಾಡುತ್ತಿರುವ ಮಕ್ಕಳಿಗೆ ಪಂಡಿತ ಜವಾಹರಲಾಲ್‌ ನೆಹರೂ ಅವರನ್ನು ಪ್ರಧಾನಿ ಚೋರಾ ಎಂದು ಬೋಧಿಸಲಾಗುತ್ತಿದೆ. ಇನ್ನೂ ಆತಂಕಕಾರಿ ಅಂಶವೆಂದರೆ, ಬಿ ಎಂದರೆ ಬ್ರಾಹ್ಮಣರು ಬುರ್ಬಕ್‌(ದಡ್ಡರು), ಸಿ ಎಂದರೆ ಕಳ್ಳ, ‘ನೆಹರೂ ಕಳ್ಳ ಪ್ರಧಾನಿ’ ಎಂದು ಶಿಕ್ಷಕರು ಹೇಳಿಕೊಡುತ್ತಿದ್ದಾರೆ. ಈ ಬಗ್ಗೆ ಗೊತ್ತಿಲ್ಲದ ಅಮಾಯಕ ವಿದ್ಯಾರ್ಥಿಗಳು, ಶಿಕ್ಷಕರು ಹೇಳಿಕೊಟ್ಟಿದ್ದನ್ನು ಹಾಗೆಯೇ ಪುನರಾವರ್ತನೆ ಮಾಡುತ್ತಾರೆ.

ಈ ಬಗ್ಗೆ ಇಲ್ಲಿನ ಶಿಕ್ಷಣ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ವಿದ್ಯಾರ್ಥಿಗಳಿಗೆ ತಪ್ಪು ಸಂದೇಶ ನೀಡುವ ಪಾಠಗಳನ್ನು ಕಲಿಸಿಕೊಡುತ್ತಿರುವ ಮಾಹಿತಿ ತಮಗೆ ಲಭ್ಯವಿಲ್ಲ. ಈ ಬಗ್ಗೆ ತನಿಖೆ ಕೈಗೊಂಡು, ಮುಂದಿನ ಕ್ರಮ ಕೈಗೊಳ್ಳುವುದಾಗಿ ಸಬೂಬು ಹೇಳಿದ್ದಾರೆ. ಆದರೆ, ಸರಿಯಾಗಿ ಹಿಂದಿ ವರ್ಣಮಾಲೆ, ತಾವು ಬೋಧಿಸುವ ವಿಷಯದ ಬಗ್ಗೆಯೇ ಸರಿಯಾಗಿ ತಿಳಿದುಕೊಂಡಿರದ ಶಿಕ್ಷಕರು ಸಿಕ್ಕಿಬಿದ್ದಿರುವ ಇಂಥ ಹಲವು ಘಟನೆಗಳು ಜಾರ್ಖಂಡ್‌, ಉತ್ತರ ಪ್ರದೇಶ, ಬಿಹಾರ ಸೇರಿದಂತೆ ಹಲವು ಕಡೆ ಈ ಹಿಂದೆಯೂ ಹಲವು ಬಾರಿ ವರದಿಯಾಗಿವೆ.

loader