5 ನೇ ತರಗತಿಯವರೆಗೆ ಯಾವುದೇ ಮಗುವನ್ನು ಫೇಲ್ ಮಾಡಬಾರದು ಎಂದು ಕೇಂದ್ರೀಯ ಶಿಕ್ಷಣ ಸಲಹಾ ಮಂಡಳಿ ಪ್ರಸ್ತಾವನೆಯನ್ನು ಸಲ್ಲಿಸಿದೆ.
ನವದೆಹಲಿ (ಅ.25): 5 ನೇ ತರಗತಿಯವರೆಗೆ ಯಾವುದೇ ಮಗುವನ್ನು ಫೇಲ್ ಮಾಡಬಾರದು ಎಂದು ಕೇಂದ್ರೀಯ ಶಿಕ್ಷಣ ಸಲಹಾ ಮಂಡಳಿ ಪ್ರಸ್ತಾವನೆಯನ್ನು ಸಲ್ಲಿಸಿದೆ.
5 ನೇ ತರಗತಿ ನಂತರ ವಿದ್ಯಾರ್ಥಿಯನ್ನು ಫೇಲ್ ಮಾಡುವುದು ಬಿಡುವುದು ರಾಜ್ಯಕ್ಕೆ ಬಿಟ್ಟ ವಿಚಾರ ಎಂದು ಕೇಂದ್ರೀಯ ಶಿಕ್ಷಣ ಸಲಹಾ ಮಂಡಳಿ ಹೇಳಿದೆ. ವಿದ್ಯಾರ್ಥಿಯ ಪ್ರತಿ ತರಗತಿಯ ಕಲಿಕಾ ಸ್ವರೂಪವನ್ನು ನಿಗದಿಪಡಿಸುವುದನ್ನು ಶಿಕ್ಷಣ ಹಕ್ಕು ಕಾಯ್ದೆ (ಆರ್ ಟಿಇ) ಅಡಿಯಲ್ಲಿ ಸೇರಿಸಲಾಗಿದೆ.
ಆರ್ ಟಿಇ ತಿದ್ದುಪಡಿಯ ಗಡುವನ್ನು ವಿಸ್ತರಿಸಿದ್ದು ಶಿಕ್ಷಕರ ತರಬೇತಿ ಗಡುವನ್ನು 2020 ರವರೆಗೆ ಮುಂದುವರೆಸಲಾಗಿದೆ.
10 ನೇ ತರಗತಿ ಬೋರ್ಡ್ ಪರೀಕ್ಷೆಗೆ ಸಂಬಂಧಿಸಿದ ವಿಚಾರವನ್ನು ಸಿಬಿಎಸ್ ಇ ಸ್ವತಃ ಪರಿಹರಿಸಿಕೊಳ್ಳಬೇಕು ಎಂದು ಕೇಂದ್ರೀಯ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
